ಐತಿಚಂಡ ರಮೇಶ ಉತ್ತಪ್ಪ ಅವರ ‘ಕುಶಾ ಕೀ ಕಹಾನಿ’ ಕೃತಿಯು ಲೇಖನಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಕವಿರಾಜ್ ಅವರು, ಕುಶಾ ಬರೀ ಕತೆಯಷ್ಟೇ ಹೇಳದೆ ನಾವೆಲ್ಲ ಬಲ್ಲ ದಸರಾ ಪಡೆಯ ಅಭಿಮನ್ಯು, ಬಲರಾಮ ಮುಂತಾದವರ ಕೆಲವು ಮಜಾ ತರುವ ಘಟನೆಗಳನ್ನು ವಿವರಿಸುವಾಗ, ಯಾರೋ ನಮ್ಮವರ ಬಗ್ಗೆಯೇ ಗಾಸಿಫ್ ಮಾಡಿದಂತೆ ಕಿವಿ, ಮನಸ್ಸುಗಳಿಗೆ ಆಪ್ತವೆನ್ನಿಸುತ್ತದೆ. ನಿಜವಾಗಿಯೂ ಆನೆಗಳಿಗೆ ಅದರಲ್ಲೂ ಕತಾನಾಯಕ ಕುಶನಿಗೆ ಇಷ್ಟು ಹಾಸ್ಯ ಪ್ರಜ್ಞೆ ಇದೆಯೋ ಗೊತ್ತಿಲ್ಲ. ಆದರೆ ಕುಶನ ಮಾತು ಕಟ್ಟುತ್ತಾ ಹೋಗಿರುವ ವಿಚಾರಗಳಲ್ಲಿ ಸಾಕಷ್ಟು ಹಾಸ್ಯವಿದೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ಐತಿಚಂಡ ರಮೇಶ ಉತ್ತಪ್ಪ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರು. ಕೃತಿಗಳು: ಆನೆ ಲೋಕದ ವಿಸ್ಮಯ, ಕುಶಾ ಕೀ ಕಹಾನಿ, ಅಭಿಮನ್ಯು ಗ್ರೇಟ್ ...
READ MORE