'ಅನರ್ಥಕಾರಿ ವಾಸ್ತು ಪೀಡೆ' ಕೃತಿಯು ಎ.ಎಸ್. ನಟರಾಜ್ ಅವರ ಲೇಖನ ಸಂಕಲನವಾಗಿದೆ. ಮುಗ್ಧಜನರು ಸಂಕಷ್ಟದಲ್ಲಿದ್ದಾಗ ಏನನ್ನು ಬೇಕಾದರೂ ನಂಬುವ ಸ್ಥಿತಿಯಲ್ಲಿರುತ್ತಾರೆ. ಇಂಥ ಸಮಯ ಸಾಧಿಸಿ ಅವರನ್ನು ವಂಚಿಸಿ ನೀಡುವ ಅಸಂಬದ್ಧ ಸಲಹೆಗಳಿಗೆ ನೊಂದ ಜನ ಸುಲಭದಲ್ಲಿ ಮರುಳಾಗುತ್ತಾರೆ. ಇಂಥವುಗಳಲ್ಲಿ ವಾಸ್ತು ಪೀಡೆಯೂ ಒಂದು. ನಿಮ್ಮ ಕಷ್ಟನಷ್ಟಗಳಿಗೆಲ್ಲ ನೀವಿರುವ ಮನೆಯ ವಾಸ್ತುದೋಷ ಕಾರಣವೆಂದು ಹೇಳುತ್ತಾ, ಕೆಡವಿ ಕಟ್ಟಿದರೆ ಸರಿಹೋಗುವುದೆಂದು ಸಲಹೆ ನೀಡುವ ವಾಸ್ತುತಜ್ಞರು ಅಣಬೆಗಳಂತೆ ಎಲ್ಲ ಕಡೆ ಬೀಡುಬಿಟ್ಟಿದ್ದಾರೆ. ನಿಮ್ಮ ಹಣದ ಒಂದು ದೊಡ್ಡ ಮೊತ್ತವನ್ನು ಕಬಳಿಸುವ ಇವರ ಮಾತು ಎಷ್ಟು ನಿಜ? ವಾಸ್ತು ಎಂದರೇನು? ಮನೆ ಕಟ್ಟುವ ಮೊದಲು ಇವರನ್ನು ಸಂಪರ್ಕಿಸಲೇ ಬೇಕೆ? ಭೌಗೋಳಿಕವಾಗಿ ಇದರ ವ್ಯಾಪ್ತಿ ಎಷ್ಟು? ಎನ್ನುವ ವಿಚಾರವನ್ನು ಈ ಕೃತಿಯಲ್ಲಿ ನೀಡಲಾಗಿದೆ.
ಲೇಖಕ ನಟರಾಜ್. ಎಸ್ ಅವರು ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಎಂ.ಎ(ಇಂಗ್ಲಿಷ್) ಮತ್ತು ಬಿ.ಎಡ್ ಪದವೀಧರರಾಗಿರುವ ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಮತ್ತು ಚಿನ್ನದ ಪದಕ ವಿಜೇತರು. ಸಾಹಿತ್ಯ, ಕಲೆ, ವಿಜ್ಞಾನ ಅವರ ಆಸಕ್ತಿಕರ ವಿಚಾರವಾಗಿದ್ದು ಕತೆ, ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಮತ್ತು ಇಂಗ್ಲಿಷ್ ಅನುವಾದ ಕಾರ್ಯದಲ್ಲೂ ತೊಡಗಿಸಿಕೊಂಡಿರುವ ಅವರ ಕೆಲವು ಕವಿತೆಗಳು, ಕತೆಗಳು, ಬರಹಗಳು ವಿವಿಧ ಪತ್ರಿಕೆಗಳು ಹಾಗು ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಭಾಷಾ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...
READ MORE( ಹೊಸತು, ಜೂನ್ 2012, ಪುಸ್ತಕದ ಪರಿಚಯ)
ರಾಜ್ ವೈಚಾರಿಕ ವೇದಿಕೆ ಜನರಲ್ಲಿ ಬೇರೂರಿದ ಮೂಢ ನಂಬಿಕೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿರುವ ಸಂಸ್ಥೆ. ಮುಗ್ಧಜನರು ಸಂಕಷ್ಟದಲ್ಲಿದ್ದಾಗ ಏನನ್ನು ಬೇಕಾದರೂ ನಂಬುವ ಸ್ಥಿತಿಯಲ್ಲಿರುತ್ತಾರೆ. ಇಂಥ ಸಮಯ ಸಾಧಿಸಿ ಅವರನ್ನು ವಂಚಿಸಿ ನೀಡುವ ಅಸಂಬದ್ಧ ಸಲಹೆಗಳಿಗೆ ನೊಂದ ಜನ ಸುಲಭದಲ್ಲಿ ಮರುಳಾಗುತ್ತಾರೆ. ಇಂಥವುಗಳಲ್ಲಿ ವಾಸ್ತು ಪೀಡೆಯೂ ಒಂದು. ನಿಮ್ಮ ಕಷ್ಟನಷ್ಟಗಳಿಗೆಲ್ಲ ನೀವಿರುವ ಮನೆಯ ವಾಸ್ತುದೋಷ ಕಾರಣವೆಂದು ಹೇಳುತ್ತಾ, ಕೆಡವಿ ಕಟ್ಟಿದರೆ ಸರಿಹೋಗುವುದೆಂದು ಸಲಹೆ ನೀಡುವ ವಾಸ್ತುತಜ್ಞರು ಅಣಬೆಗಳಂತೆ ಎಲ್ಲ ಕಡೆ ಬೀಡುಬಿಟ್ಟಿದ್ದಾರೆ. ನಿಮ್ಮ ಹಣದ ಒಂದು ದೊಡ್ಡ ಮೊತ್ತವನ್ನು ಕಬಳಿಸುವ ಇವರ ಮಾತು ಎಷ್ಟು ನಿಜ ? ವಾಸ್ತು ಎಂದರೇನು ? ಮನೆ ಕಟ್ಟುವ ಮೊದಲು ಇವರನ್ನು ಸಂಪರ್ಕಿಸಲೇ ಬೇಕೆ ? ಭೌಗೋಳಿಕವಾಗಿ ಇದರ ವ್ಯಾಪ್ತಿ ಎಷ್ಟು ? ಈ ಪುಸ್ತಕದಲ್ಲಿ ನೀಡಲಾದ ವಿವರವು ವಾಸ್ತುಶಾಸ್ತ್ರ ಎಷ್ಟೊಂದು ಹಾಸ್ಯಶಾಸ್ತ್ರವೆಂದು ನಿಮಗೆ ಮನವರಿಕೆ ಯಾದೀತು. ನೀವು ಮನೆ ಕಟ್ಟಲು ಪ್ರಾರಂಭಿಸುವ ಮುನ್ನ ಈ ಪುಸ್ತಕವನ್ನೋದಿ. ವಾಸ್ತುಶಾಸ್ತ್ರ ಪಂಡಿತರ ಕಛೇರಿಯತ್ತ ಒಮ್ಮೆ ಹುಸಿನಗೆ ಬೀರಿ, ಮರಳು, ಇಟ್ಟಿಗೆ, ಸಿಮೆಂಟು ಮುಂತಾದ ಅವಶ್ಯಕ ಸಾಮಗ್ರಿ ಖರೀದಿಸಲು ಮುಂದಕ್ಕೆ ನಡೆಯಿರಿ. ಸಾಧ್ಯವಾದರೆ ಪರಿಸರಸ್ನೇಹಿ ಮನೆ ಕಟ್ಟುವತ್ತ ಗಮನ ನೀಡಿ.