‘ಬದುಕು ಜಟಕಾಬಂಡಿ’ ಹಿರಿಯ ಪತ್ರಕರ್ತ ಎನ್.ಅರ್ಜುನದೇವ ಅವರ ಲೇಖನ ಸಂಕಲನ. ಇಲ್ಲಿಯ ಕೆಲ ಬರೆಹಗಳು ಸಾಂಸ್ಕೃತಿಕ ದಾಖಲೆಗಳು. ಗತಿಸಿದ ದಶಕಗಳೊಂದಿಗೆ ವಿಸ್ಕೃತಿಗೆ ಸರಿದ ಜೀವನ ಶೈಲಿಯ ವಿಹಂಗಮ ನೋಟ ಇಲ್ಲಿದೆ. ನಾವು ನೋಡು ನೋಡುತ್ತಿದ್ದಂತೆಯೇ ಕಣ್ಮರೆಯಾದ ಎಷ್ಟೋ ಸಂಗತಿಗಳನ್ನು ಅರ್ಜುನದೇವ ನೆನಪಿಸಿದ್ದಾರೆ. ಮನುಷ್ಯ ಸಮಾಜದ ಕಪ್ಪು-ಬಿಳುಪನ್ನು, ಓರೆ-ಕೋರೆಗಳನ್ನು ಬಿಂಬಿಸುವ ಪ್ರಸಂಗಗಳನ್ನು ಸೆರೆಹಿಡಿದಿದ್ದಾರೆ. ಮನಸ್ಸು ಮುದುಡಿಸುವ ಸಂದರ್ಭಗಳೊಂದಿಗೆ ಮಾನವೀಯತೆ ಮೆರೆದ ಘಟನೆಗಳೂ ಸೇರಿವೆ. ಆಯಾ ಬರೆಹ ಅಚ್ಚಾದ ತೇದಿಯನ್ನು ನಮೂದಿಸಿರುವುದರ ಉಪಯುಕ್ತತೆಯನ್ನು ಉತ್ತೇಕ್ಷಿಸುವ ಅಗತ್ಯವಿಲ್ಲ, ಅಷ್ಟು ಯೋಗ್ಯವಾಗಿದೆ.
ಹಿರಿಯ ಪತ್ರಕರ್ತ, ಅಂಕಣಬರಹಗಾರ ಅರ್ಜುನ ದೇವ ಅವರು ಮೂಲತಃ ಕೋಲಾರ ಜಿಲ್ಲೆ ನರಸಾಪುರ ಹೋಬಳಿ ಚೌಡದೇನಹಳ್ಳಿಯವರು. ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅರ್ಜುನ ದೇವ ಅವರು ಬರಹಗಳ ಮೂಲಕ ಜನಪ್ರಿಯರಾದವರು. ತಮ್ಮ ಪಕ್ವಗೊಂಡ ಅನುಭವಗಳೊಂದಿಗೆ ಅವರು ಹಲವು ಅಂಕಣಗಳನ್ನು ಬರೆದಿದ್ದಾರೆ. ಅವರ ಅಂಕಣ ಬರಹಗಳ ಸಂಕಲನ 'ಬದುಕು ಜಟಕಾಬಂಡಿ' ಜನಮನ್ನಣೆಗಳಿಸಿದೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ ಅವರು ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಸುರ್ಯೋದಯ ಪತ್ರಿಕೆ ಸಂಪಾದಕರಾಗಿಯೂ ಕೆಲಸ ಮಾಡಿದ್ದ ಅವರು 2024 ಏಪ್ರಿಲ್ 24ರಂದು ಕೆಂಗೇರಿ ಉಪನಗರದ ...
READ MORE