ಲೇಖಕ ಡಾ.ವಿಜಯಕುಮಾರ ಜಿ.ಪರುತೆ ಬರೆದ ಲೇಖನಗಳ ಸಂಗ್ರಹ ಕೃತಿ-ನುಡಿ ಸಂಪದ. ಒಟ್ಟು 13 ಲೇಖನಗಳಿವೆ. ಮೀರಾಬಾಯಿ, ಮಹಾದೇವಿ ಅಕ್ಕ, ಕಬೀರ್, ಸರ್ವಜ್ಞ,, ದೇವರ ದಾಸಿಮಯ್ಯ, ದಾಸಯ್ಯ, ಸಂಗೀತ ಸಮಾಜ,ವಚನ ಸಾಹಿತ್ಯ,ಹೀಗೆ ಹಲವಾರು ಶರಣರ ಬದುಕು ಮತ್ತು ಬರಹದ ಮೇಲೆ ಬೆಳಕು ಚೆಲ್ಲಲಾಗಿದೆ.
ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...
READ MORE