ಇಲ್ಲಿ ಯಾವುದೂ ಅಮುಖ್ಯವಲ್ಲ

Author : ಡಿ.ಎಸ್.ನಾಗಭೂಷಣ

Pages 300

₹ 150.00




Year of Publication: 2010
Published by: ಹಸಿರು ಪ್ರಕಾಶನ
Address: #90, 16ನೇ ಕ್ರಾಸ್‌, 4ನೇ ಹಂತ, ಜೆ.ಪಿ. ನಗರ, ಬೆಂಗಳೂರು- 560078.
Phone: 9449987678

Synopsys

ಇಲ್ಲಿ ಯಾವುದೂ ಅಮುಖ್ಯವಲ್ಲ ಸಮಾಜವಾದಿ ಸಂಕಥನಗಳ ಪುಸ್ತಕವನ್ನು ಲೇಖಕ ಡಿ.ಎಸ್.‌ ನಾಗಭೂಷಣ ಅವರು ರಚಿಸಿದ್ದಾರೆ. ಇದರಲ್ಲಿ ಸಾಹಿತ್ಯ, ಸಿನಿಮಾ, ನಾಟಕ ಕುರಿತ ವಿಚಾರ-ವಿಮರ್ಶೆ ಇದೆ. ರಾಜಕೀಯ ವಿಶ್ಲೇಷಣೆಯಿದೆ. ಸಮಕಾಲೀನ ಸಾಂಸ್ಕೃತಿಕ ವಿದ್ಯಾಮಾನಗಳಿಗೆ, ವ್ಯಾಖ್ಯಾನಗಳಿಗೆ ಲೇಖಕರು ಬರೆದ ಪ್ರತಿಕ್ರಿಯೆಗಳಿವೆ. ಇಲ್ಲಿ ಮುಖ್ಯ-ಅಮುಖ್ಯಗಳ ಭೇದವಿಲ್ಲದೆ, ಇಲ್ಲಿನ ಎಲ್ಲಾ ಬರಹಗಳು ತಮ್ಮದೇ ಆದ ಮಹತ್ವ ಮತ್ತು ಪ್ರಸ್ತುತತೆಯನ್ನು ಹೊಂದಿವೆ. ಈ ಕೃತಿಯಲ್ಲಿ ವೈಚಾರಿಕತೆ ಕಳೆದುಕೊಂಡ ಪ್ರಗತಿಪರತೆ, ಕವಿತೆಯ ಜೊತೆ ಮೂರು ತಾಸು, ಪ್ರಜಾತಂತ್ರವನ್ನೇ ಸೋಲಿಸುವ ಚುನಾವಣೆಗಳು, ಶಾಂತರಸರ ಕಥೆಗಳು, ಅನಗತ್ಯ ಜಾತಿ ಪ್ರಸ್ತಾಪ, ನನ್ನ ಮೆಚ್ಚಿನ ಹತ್ತು ಪುಸ್ತಕಗಳು, ಇಲ್ಲಿ ಯಾವೂದೂ ಅಮುಖ್ಯವಲ್ಲ, ಸಾಹಿತ್ಯ ಸಮ್ಮೇಲನದ ಹೆಸರಿನಲ್ಲಿ, ಗೆರೆ ದಾಟಿದ ಮೇಲೆ, ಮೂರು ಪ್ರತಿಕ್ರಿಯೆಗಳು, ಕೆನೆ ಪದರದಾಚೆ ಈಚೆ, ಕೆಲವು ಪ್ರಕಟವಾಗದ ಪತ್ರಗಳು ಹೀಗೆ ಹಲವಾರು ಉತ್ತಮ ಲೇಖನಗಳು ಈ ಕೃತಿಯೊಳಗಿವೆ.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Reviews

(ಹೊಸತು, ಏಪ್ರಿಲ್ 2012, ಪುಸ್ತಕದ ಪರಿಚಯ)

ತಮ್ಮ ಸುತ್ತಮುತ್ತ ನಡೆಯುವ ಎಲ್ಲ ವಿದ್ಯಮಾನಗಳನ್ನು ಜಾಗ್ರತೆಯಾಗಿ ಅವಲೋಕಿಸಿ ತಮಗೆ ಅನಿಸಿದ ಸೂಕ್ತ ಪ್ರತಿಕ್ರಿಯೆ ನೀಡುವುದು ಶ್ರೀ ಡಿ. ಎಸ್. ನಾಗಭೂಷಣ ಅವರ ಒಂದು ಸ್ಪಂದನಾ ವಿಧಾನ. ವಿಷಯವೈವಿಧ್ಯಗಳಿರುವುದರಿಂದ ಇವನ್ನು ಲೇಖನಗಳ ಒಕ್ಕೂಟವೆಂದು ಅವರೇ ಹೆಸರಿಸಿದ್ದಾರೆ. ಇತರರ ಬರವಣಿಗೆಗಳು, ಪುಸ್ತಕಗಳು ಮಾತ್ರವಲ್ಲದೆ ಸಿನಿಮಾ ರಂಗಭೂಮಿ, ರಾಜಕೀಯ ವಿದ್ಯಮಾನಗಳು - ಮುಂತಾದ ಇನ್ನೂ ಅನೇಕ ವಸ್ತು-ವಿಷಯಗಳಿರುವುದರಿಂದ ಎಲ್ಲ ದಿಕ್ಕುಗಳಿಗೂ ಮುಖಮಾಡಿರುವ ಲೇಖನಗಳಿವು. ನಿರ್ದಾಕ್ಷಿಣ್ಯ - ನೇರನುಡಿಗಳಲ್ಲಿ ತನ್ನ ವಿಚಾರಗಳನ್ನು ಸ್ಪಷ್ಟಪಡಿಸುವುದು, ಟೀಕೆ, ವಿಮರ್ಶೆಗಳನ್ನು ಒಳಗೊಂಡಿರುವುದು ಇವರ ಲೇಖನಗಳ ವೈಶಿಷ್ಟ್ಯ. ತಾವು ಬರೆದುದು ಶ್ರೇಷ್ಠ ಮತ್ತು ಅಂತಿಮವೆಂದು ತೀರ್ಮಾನಿಸಿ ಬೀಗುವ ಕೆಲವು ಲೇಖಕರಿಗೆ ಇವರ ಪ್ರತಿಕ್ರಿಯೆಗಳು ಸ್ವಲ್ಪ ಖಾರ-ಕಹಿ-ಒಗರು ಎನ್ನಿಸಬಹುದು. ಆದರೂ ಎಲ್ಲರನ್ನೂ ಒಂದೇ ಬಾರುಕೋಲು ಸೇವೆಗೆ ಒಳಪಡಿಸುವುದೂ ಆಕ್ಷೇಪಾರ್ಹ. ಸಮಾಜದಲ್ಲಿನ ಕಪ್ಪು-ಬಿಳುಪುಗಳು, ಉತ್ತಮ- ಕನಿಷ್ಠಗಳು ಮನದಾಳದಲ್ಲಿ ಹುದುಗಿದ ನಿಜಬಣ್ಣಗಳೆಲ್ಲ ಪರಸ್ಪರ ಸಂವಾದಗಳ ಮೂಲಕವೇ ಹೊರಬರಬೇಕು. ಪ್ರತಿಕ್ರಿಯೆಗಳು ಹೆಚ್ಚು ಹೆಚ್ಚು ಬಂದಷ್ಟೂ ಪರಸ್ಪರರ ಆಕಾಶ-ಪಾತಾಳಗಳಂಥ ಅಂತರಗಳು ಸ್ವಲ್ಪ ಕಡಿಮೆಯಾದಾವು. ಕರ್ನಾಟಕದ ಸರಿಸುಮಾರು ಎಲ್ಲ ಸಾಹಿತ್ಯಕ ಮತ್ತು ಇತರ ಪತ್ರಿಕೆಗಳಲ್ಲಿ ಶ್ರೀ ಡಿ. ಎಸ್. ನಾಗಭೂಷಣರ ಲೇಖನ, ಪ್ರತಿಕ್ರಿಯೆ, ಪತ್ರಸಂವಾದ ಪ್ರಕಟವಾಗುತ್ತಿರುತ್ತವೆ. ಅವುಗಳನ್ನು ಅಲ್ಲಲ್ಲಿ ಓದಲು ಸಾಧ್ಯವಾಗದವರಿಗೆ ಇಲ್ಲಿ ಒಂದೆಡೆ ಲಭ್ಯವಾಗಿವೆ.

Related Books