‘ರಸ ತತ್ತ್ವ’ ಆಹಾರ ತಜ್ಞ ಕೆ. ಸಿ. ರಘು ಅವರ ಲೇಖನಗಳ ಸಂಕಲನ. ಆಹಾರಕ್ಕೆ ಸಂಬಂಧಿಸಿದ ಪ್ರಾಚೀನ ಹಾಗೂ ಆಧುನಿಕ ಜ್ಞಾನವನ್ನು ಆಳವಾಗಿ ಪಡೆದಿರುವ ತಜ್ಞರು, ಈಗಾಗಲೇ ‘ತುತ್ತು ತತ್ವ’ ಕೃತಿ ಪ್ರಕಟಿಸಿದ್ದು, ಪ್ರಸ್ತುತ ಕೃತಿಯು ‘ರಸ ತತ್ವ’ ಅದರ ಮುಂದುವರೆದ ಭಾಗದಂತಿದೆ. ಪುಟ್ಟ ಪುಟ್ಟ ಅಧ್ಯಾಯಗಳ ಬರೆಹದಲ್ಲಿ ಅಪರೂಪದ ಒಳನೋಟಗಳು ದೊರೆಯುತ್ತಿವೆ. ಅವೆಲ್ಲವು ಉತ್ತಮ ಉಕ್ತಿ ಇಲ್ಲವೇ ಉಲ್ಲೇಖಗಳ ಗುಣವುಳ್ಳಂತಹವು.
ಆಹಾರ ತಜ್ಞ, ಅಂಕಣಕಾರ ಕೆ.ಸಿ. ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿತ್ತು. ಭಾರತದಲ್ಲಿ ಈ ರೀತಿಯ ...
READ MORE