'ದ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್' ವಿಶ್ವ ಕಂಡ ಅತೀ ಚಾಲಾಕಿ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ಕುರಿತು ನಿೃವೃತ್ತ ಪೊಲೀಸ್ ಅಧಿಕಾರಿ ಡಿ.ವಿ. ಗುರುಪ್ರಸಾದ್ ಅವರು ಬರೆದಿರುವ ಕೃತಿ. ವಿಶ್ವ ಕಂಡ ಅತಿ ಬುದ್ಧಿವಂತ, ಅತಿ ಕ್ರೂರಿ ಹಾಗೂ ಅತಿ ಚಾಲಾಕೀ ಕ್ರಿಮಿನಲ್ಗಳಲ್ಲಿ ಚಾರ್ಲ್ಸ್ ಶೋಭರಾಜ್ನ ಹೆಸರು ಅಗ್ರಪಂಕ್ತಿಯಲ್ಲಿದೆ. `ದ ಬಿಕಿನಿ ಕಿಲ್ಲರ್’ ಎಂದೇ ಕುಖ್ಯಾತನಾದ ಸುಂದರ ಪದನದ ಈ ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ಎಂಥಹವರನ್ನೂ ಮೋಡಿ ಮಾಡುವ ತನ್ನ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ಹತ್ತು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು `ದ ಸರ್ಪೆಂಟ್’ ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MORE