ಲೇಖಕಿ ಪ್ರಿಯಾಂಕ ಎಂ.ಜಿ ಅವರ ಲೇಖನಗಳ ಸಂಕಲನ ಹದಿಹರೆಯದವರ ನಿತ್ಯಗೊಂದಲಗಳ ಗುಟ್ಟು…ಈ ಕೃತಿಯಲ್ಲಿ ಡಿ.ಸಿ.ಚಿತ್ರಲಿಂಗಯ್ಯ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಮೂಢನಂಬಿಕೆಯ ವಿರುದ್ಧ ಜಾಗೃತಿ ಮಾಡಿಸುವ ಮೂಲಕ ಜನರ ಚಿತ್ತ ವೈಚಾರಿಕತೆ ಮತ್ತು ವೈಜ್ಞಾನಿಕತೆಯತ್ತ ವಾಲುವಂತೆ ಮಾಡುವಲ್ಲಿ ಈ ಕೃತಿಯ ಮೂಲಕ ಲೇಖಕಿ ಯಶಸ್ವಿಯಾಗಿದ್ದಾರೆ. ಕೃತಿಯಲ್ಲಿ ಹಲವು ಗಂಭೀರ ಸ್ವರೂಪದ ವಿಚಾರಗಳ ಚರ್ಚೆಯನ್ನು ಬಹಳ ಸಮರ್ಥವಾಗಿ ಮಾಡಿದ್ದಾರೆ. ಹಸ್ತಮೈಥುನ, ಋತುಸ್ರಾವ, ಹದಿಹರೆಯದಲ್ಲಾಗುವ ಬದಲಾವಣೆ ಮುಂತಾದ ವಿಚಾರಗಳ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ್ದಾರೆ. ಮನೋವಿಜ್ಞಾನದ ನೆಲೆಯಲ್ಲಿ ಹದಿಹರೆಯದವರ ಗೊಂದಲಗಳಿಗೆ ಸೂಕ್ತ ಪರಿಹಾರವನ್ನು ಈ ಕೃತಿಯು ನೀಡಿದೆ. ಹದಿಹರೆಯದವರ ದೈಹಿಕ, ಮಾನಸಿಕ, ಬೌಧಿಕ ಹಾಗೂ ಭಾವನಾತ್ಮಕ ವಿಚಾರಗಳನ್ನು ಅತ್ಯಂತ ಸರಳವಾಗಿ ತಿಳಿಸುವ ಪ್ರಯತ್ನ ಮಾಡಿರುವ ಲೇಖಕಿ ಡಾ.ಪ್ರಿಯಾಂಕ ಎಂ.ಜಿ. ಅವರ ಕಾರ್ಯ ಅಭಿನಂದನೀಯ. ಈ ಕೃತಿಯು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಉತ್ತಮ ಕೈಪಿಡಿಯಾಗುವ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆಂಬುದು ಖಚಿತ ಎಂಬುದಾಗಿ ಹೇಳಿದ್ದಾರೆ.
ತುಮಕೂರಿನವರಾದ ಲೇಖಕಿ ಪ್ರಿಯಾಂಕ ಎಂ.ಜಿ 08-02-1988 ರಂದು ಜನಿಸಿದರು. A Study on Purport and Expression in English Poems of Kuvempu ಎಂಬ ವಿಷಯದಲ್ಲಿ ಹಂಪಿ ವಿಶ್ವವಿದ್ಯಾಲಯದಿಮದ ಪಿಹೆಚ್ ಡಿ ಪದವಿಯನ್ನು ಪಡೆದರು. ಕೃತಿಗಳು; ಅನುಸೃಷ್ಟಿ, ಕಾಲ ನಾ..!, ಹದಿಹರೆಯದವರ ನಿತ್ಯದ ಗೊಂದಲಗಳ ಗುಟ್ಟು, ಗುಡಿಸಲಿನಲ್ಲಿ ಅರಳಿದ ಹೂವು, ಜುಂಜಪ್ಪ ಕಾವ್ಯ ಇಂಗ್ಲಿಷ್ ಗೆ ಅನುವಾದ(ಅಪ್ರಕಟಿತ) . ...
READ MORE