‘ನೀನೆ ಅರಸು’ ಕೃತಿಯು ಸದಾನಂದ ಹೆಗಡೆ ಹರಗಿ ಅವರ ಕೃತಿಯಾಗಿದೆ. ಈ ಕೃತಿಯು ಮಾಹಿತಿ ಗುಜರಿಯಲ್ಲಿ ಕಾಣೆಯಾದ ನಿನ್ನನ್ನೊಳಗಣ ವ್ಯಕ್ತಿಯ ಕುರಿತ ಚಿತ್ರಣವಾಗಿದೆ. ನಮ್ಮ ಸುಪ್ತ ಮನಸ್ಸಿನಲ್ಲಿ ನಿಂತು ಆಟ ಆಡಿಸುವ, ನಿರ್ದೇಶನ ನೀಡುವ ವ್ಯಕ್ತಿ ಅಥವಾ ಅನುಭವ ಯಾವುದು?, ಇಕ್ಕಟ್ಟು, ಬಿಕ್ಕಟ್ಟಿನಲ್ಲಿ ನಾವು ಯಾರಂತೆ ವರ್ತಿಸುತ್ತೇವೆ?, ಉತ್ತರಕ್ಕಾಗಿ ಯಾರತ್ತ ದೃಷ್ಟಿ ಹರಿಸುತ್ತೇವೆ? ಬಾಲಿಷವಾಗಿ ಆಡಿದ್ದಾದರೆ ಅದಕ್ಕೇನು ಕಾರಣ? ಸಂದರ್ಶನದಲ್ಲಿ, ಸವಾಲಿನಲ್ಲಿ ಅಪ್ ಟುಡೇಟ್ ಆಗಿರಲು ನಮ್ಮ ತಯಾರಿ ಹೇಗಿರಬೇಕು? ಶಾಲಾ ಶಿಕ್ಷಣದ ಹೊರತಾಗಿ ಅದೆಷ್ಟೋ ಸಾವಿರ ವಿಷಯವನ್ನು ನಾವು ದಿನವೂ ಕಲಿಯುತ್ತೇವೆ. ರಾಶಿ ರಾಶಿ ಮಾಹಿತಿ ಸಂಗ್ರಹಿಸಿದ ಮನಸ್ಸು ಹಳೆ ಕಡತದ ಗುಜರಿಯಾಗುತ್ತದೆ. ಒಳಗೆ ಇರುವ ನಿನ್ನನ್ನು ಊರೆಲ್ಲ ಅರಸಿದರೆ -ಹುಡುಕಿದರೆ ಆತ ಸಿಗುವುದಿಲ್ಲ. ಬೇರೊಬ್ಬರಿಂದ ನಿಮ್ಮೊಳಗಿನ ಆತನನ್ನು ಅರಸುವುದು ಸಾಧ್ಯವಿಲ್ಲ. ಆತ ನಿಮ್ಮೊಳಗಿನ ವ್ಯಕ್ತಿ.ನಿಮ್ಮೊಳಗಿನ ನಾಯಕ ಎನ್ನುತ್ತದೆ ಈ ಕೃತಿ.
ಸದಾನಂದ ಹೆಗಡೆ ಹರಗಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ವೃತ್ತಿಯಲ್ಲಿ ಪತ್ರಕರ್ತರು. ಧಾರವಾಡದಲ್ಲಿ ಬಿಎಸ್ಸಿ ಪದವಿಯನ್ನು ಪೂರೈಸಿರುವ ಅವರು ಮೈಸೂರಿನಲ್ಲಿ ಎಂ.ಎ ಸೈಕಾಲಜಿ ಪದವಿಯನ್ನು ಪಡೆದಿರುತ್ತಾರೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರದಲ್ಲಿ ಕೆಲಕಾಲ ಮಾರುಕಟ್ಟೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಕ್ಷಗಾನ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತೆಂಕುತಿಟ್ಟಿನ ದೇವೀ ಮಹಾತ್ಮೆ ಕುರಿತು ಕಾಫಿಟೇಬಲ್ ಪುಸ್ತಕವನ್ನು ಹೊರ ತಂದಿದ್ದಾರೆ. ಚಿತ್ರಕಲೆ, ಏಕ ವ್ಯಕ್ತಿ ಪ್ರದರ್ಶನ ಅವರ ಹವ್ಯಾಸ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇವರ ನೇತೃತ್ವದಲ್ಲಿ ಚಿತ್ರಕಲಾ ಪರಿಷತ್ತು ಹೊರತಂದ ಸ್ವಸ್ತಿ ಅರ್ಟ್ ಬುಲೆಟಿನ್ ಗಮನ ಸೆಳೆದಿರುತ್ತದೆ. ದಾವಣಗೆರೆಯಲ್ಲಿ ಚಿತ್ರಕಲಾ ...
READ MORE