ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರ ‘ರುಪರ್ಟ್ ಮುರ್ಡೋಕ್’ ಮಾಧ್ಯಮ ಮಹಾಶಯನ ಬಗೆಗಿನ ಕೃತಿಯಾಗಿದೆ. ಈ ಕೃತಿಗೆ ಮಮತಾ ಜಿ ಸಾಗರ ಅವರು ಬೆನ್ನುಡಿ ಬರೆದಿದ್ದಾರೆ. ‘ರುಪರ್ಟ್ ಮುರ್ಡೋಕ್ ನ ಹೆಸರು ಕೇಳಿದ್ದೆ.ಆದರೆ ಅವನ ಸಾಹಸ, ಪರಾಕ್ರಮಗಳು ಗೊತ್ತಿರಲಿಲ್ಲ. ಪತ್ರಿಕೆಗಳನ್ನು ಖರೀದಿಸುವ ದಾಹ, ತನ್ನ ಮಾಧ್ಯಮ ಸಾಮ್ರಾಜ್ಯವನ್ನು ವಿಸ್ತರಿಸುವ ಚಪಲ, ಪ್ರತಿಸ್ಪರ್ಧಿ ಪತ್ರಿಕೆಗಳಿಗೆ ಪೈಪೋಟಿ ಒಡ್ಡುವ ಪರಿ ರೋಚಕ. ರುಪರ್ಟ್ ಮುರ್ಡೋಕ್ ಬರೀ ಮಾಧ್ಯಮ ಧಣಿ ಮಾತ್ರವಲ್ಲ, ಆತ ಮೂಲತಃ ಪತ್ರಕರ್ತನೂ ಹೌದು. ಒಬ್ಬ ವ್ಯಕ್ತಿ ಬೇರೆ ಬೇರೆ ದೇಶಗಳಲ್ಲಿ ನೂರಾರು ಪತ್ರಿಕೆಗಳನ್ನು ನಡೆಸುತ್ತಿರುವುದು ಅಚ್ಚರಿ ವಿಷಯ. ರುಪರ್ಟ್ ಮುರ್ಡೋಕ್ ನ ಜೀವನ ವಿಶ್ವಶ್ವರ ಭಟ್ಟರ ಲೇಖನಿಯಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ. ನಾನಂತೂ ರುಪರ್ಟ್ ಮುರ್ಡೋಕ್ ನ ವ್ಯಕ್ತಿತ್ವಕ್ಕೆ ಭಟ್ ರ ಬರವಣಿಗೆಗೆ ಮನಸೋತಿದ್ದೇನೆ. ಪತ್ರಿಕೋದ್ಯಮದ ಅನೇಕ ಒಳಸುಳಿಗಳನ್ನು ಈ ಕೃತಿ ಬಿಟ್ಟುಕೊಡುತ್ತದೆ. ಒಬ್ಬ ವ್ಯಕ್ತಿ ಕೈಯಲ್ಲಿ ಮಾಧ್ಯಮ ಸಿಕ್ಕರೆ ಅದೆಂಥಾ ಅಪಾಯಕ್ಕೆ ಸಿಲುಕಬಹುದೆಂಬುದನ್ನೂ ಇಲ್ಲಿ ಎಚ್ಚರಿಸಲಾಗಿದೆ’ ಎಂಬುದಾಗಿ ಮಮತಾ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE