ಲೇಖಕ ಡಾ. ಎಸ್. ಪ್ರಸಾದ ಸ್ವಾಮಿ ಅವರು ರಚಿಸಿದ ಕೃತಿ-ಲೋಕದ ಪರಿಯೆ ಅಲ್ಲ. ಸಂಸ್ಕೃತಿಗಳ ಚಿಂತನೆಗಳನ್ನು ಒಳಗೊಂಡ ಕೃತಿ ಇದು. ಮನುಷ್ಯನಿಗೆ ಉತ್ತಮ ಸಂಸ್ಕಾರಗಳನ್ನು ನೀಡುವುದೇ ಸಂಸ್ಕೃತಿ. ಸಂಸ್ಕೃತಿ ಭರಿತ ನಾಗರಿಕತೆ ಇಲ್ಲದೇ ಹೋದರೆ ಮನುಷ್ಯನಿಗೆ ಬೆಲೆ ಇಲ್ಲ. ಈ ಹಿನ್ನೆಲೆಯಲ್ಲಿ, ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಮನವರಿಕೆ ಮಾಡಿಕೊಡುವ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.
ಲೇಖಕ, ವಿಮರ್ಶಕ, ಸಂಪಾದಕ, ಅನುವಾದಕ ಎಸ್. ಪ್ರಸಾದಸ್ವಾಮಿ ಅವರು ಜನಿಸಿದ್ದು 1965 ಜುಲೈ 21ರಲ್ಲಿ. ಹುಟ್ಟೂರು ಚಿತ್ರದುರ್ಗ. ಪ್ರಸ್ತುತ ಬೆಂಗಳೂರಿನ ಟಿ ದಾಸರಹಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರೊಫೆಸರ್- ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮನ್ನು ಕಾಲೇಜು ದಿವಸಗಳಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಸಾದಸ್ವಾಮಿಯವರ ಪ್ರಮುಖ ಕೃತಿಗಳೆಂದರೆ ನೀರು ತಂದವರು, ರಂಗರಾವಣ, ಶೀಲವೆಂಬುದು ಸೂತಕ, ಲೋಕದ ಪರಿಯೆ ಅಲ್ಲ ಇವರ ಪ್ರಮುಖ ಕೃತಿಗಳು. ಇವರಿಗೆ ಕೆ.ವಿ. ಸುಬ್ಬಣ್ಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ...
READ MORE