‘ಅರ್ಜುನ’ ಐತಿಚಂಡ ರಮೇಶ್ ಉತ್ತಪ್ಪನವರ ಕೃತಿಯಾಗಿದೆ. ಇದಕ್ಕೆ ಎ.ಪಿ. ಗಣೇಶ್ ಅವರ ಬೆನ್ನುಡಿ ಬರಹ ಹೀಗಿದೆ; ಎಂತಹ ಕೃತಿ ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು ವಿಶೇಷವಲ್ಲವೇ.. ಎಂದು. ಐತಿಚಂಡ ರಮೇಶ್ ಉತ್ತಪ್ಪ ಒಬ್ಬ ವಿಸ್ಮಯ ಬರಹಗಾರ. ಅವರು ಪ್ರಾಣಿಗಳನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರನ್ನೂ ನೋಡಲಿಲ್ಲ. ಒಂದು ಆನೆಯ ಅಥವಾ ಯಾವುದೇ ಪ್ರಾಣಿಯನ್ನು ಗಮನಿಸಿ ಅದರ ಸ್ವಭಾವವನ್ನು ಹೀಗೆ ಎಂದು ಹೇಳುತ್ತಾರೆ. ಅಧ್ಯಯನ, ಸಂಶೋಧನೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅವರು ಪ್ರಾಣಿಗಳ ವರ್ತನಶಾಸ್ತ್ರವನ್ನೂ ತಿಳಿದುಕೊಂಡಿದ್ದಾರೆ. ಬೇರೆ ಬರಹಗಾರರು, ಪ್ರಾಣಿಪ್ರಿಯರು ಒಂದು ಪ್ರಾಣಿಯನ್ನು ನೋಡುವುದಕ್ಕೂ ರಮೇಶ್ ಉತ್ತಪ್ಪ ಅವರು ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರು ಪ್ರಾಣಿಗಳ ಪ್ರತಿ ನಡೆಯನ್ನು ಆಕರ್ಷಕವಾಗಿ ವಿವರಿಸಬಲ್ಲರು. ಆನೆ, ಹುಲಿ, ಚಿರತೆ, ಹಾವುಗಳ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದು, ಮಾತಿಗೆ ಸಿಕ್ಕಾಗ ದೀರ್ಘ ವಿವರಣೆ ನೀಡುತ್ತಾರೆ. ಈ ಕೃತಿಯಲ್ಲಿ ದಸರಾ ಆನೆಗಳ ಪೈಕಿ ದುರಂತ ನಾಯಕರು ಎಂದು ದ್ರೋಣ, ಬಲರಾಮ, ರಾಜೇಂದ್ರ, ಅರ್ಜುನ, ಗೋಪಾಲಸ್ವಾಮಿ, ಜೂನಿಯರ್ ದ್ರೋಣ ಅವರ ಸಾಹಸಗಾಥೆಯನ್ನು ಹೃದಯಂಗಮವಾಗಿ ವಿವರಿಸಿದ್ದಾರೆ. ನಿಮಗೆ ಆನೆ ಲೋಕದ ವಿಸ್ಮಯ ಜಗತ್ತನ್ನು ಅವರು ಪರಿಚಯಿಸಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದು ವಿವರಿಸಿದ್ದಾರೆ.
ಲೇಖಕ ಐತಿಚಂಡ ರಮೇಶ ಉತ್ತಪ್ಪ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರು. ಕೃತಿಗಳು: ಆನೆ ಲೋಕದ ವಿಸ್ಮಯ, ಕುಶಾ ಕೀ ಕಹಾನಿ, ಅಭಿಮನ್ಯು ಗ್ರೇಟ್ ...
READ MORE