ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳು ವಿಭಿನ್ನ. ಈ ಭಾಗದ ಗೋಳು ಅಷ್ಟಾಗಿ ಪ್ರತಿಧ್ವನಿಸಿಲ್ಲ. ಲೇಖಕ ರಝಾಕ್ ಅವರು ಈ ಕೃತಿಯಲ್ಲಿ ಅಲ್ಲಿನ ಸಮಸ್ಯಾತ್ಮಕ ಅಂಶಗಳನ್ನು ತಿಳಿಸಿ, ಆ ಪ್ರದೇಶದ ಸುಧಾರಣೆಗೆ ಮತ್ತು ಅಭಿವೃದ್ಧಿ ಪಥದತ್ತ ಸಾಗುವ ಹಲವು ಸೂಕ್ತ ಮಾರ್ಗಗಳನ್ನು ವಿವರವಾಗಿ ಚರ್ಚಿಸಿದ್ದಾರೆ.
ಲೇಖಕ ರಝಾಕ್ ಉಸ್ತಾದ್ ಅವರು ಮೂಲತಃ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದವರು. ಶಾಲಾ ಶಿಕ್ಷಣವನ್ನು ಲಿಂಗಸೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಪೂರ್ಣಗೊಳಿಸಿ, ಉನ್ನತ ವ್ಯಾಸಂಗ ಎಂ.ಎಸ್ಸಿ (ರಸಾಯನಶಾಸ್ತ್ರ) ಹಾಗೂ ಪಿಹೆಚ್.ಡಿ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಪಡೆದಿದ್ದಾರೆ. ಸಾಮಾಜಿಕ ಕಳಕಳಿಯೊಂದಿಗೆ ಹತ್ತು ಹಲವು ಸಂಘಟನೆಗಳಲ್ಲಿ ಪಾಲ್ಗೊಂಡು ಹೋರಾಟ ಮಾಡಿದ್ದಾರೆ. ‘ಹೈದ್ರಾಬಾದ್ ಕರ್ನಾಟಕ ಕಥೆ-ವ್ಯಥೆ’ ಎಂಬ ಇವರ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಪ್ರಕಟಿಸಿದೆ. ...
READ MORE