‘ಮಾತೊಂದ ಹೇಳುವೆ..’ ಗುರುಪಾದ ಬೇಲೂರು ಅವರ ‘ವಾರದ ಮಾತುಕತೆ’ಗಳ ಸಂಗ್ರಹವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಸಾಮಾನ್ಯವಾಗಿ ಬರವಣಿಗೆಗಳು ಚಲನಚಿತ್ರಗಳಂತಹ ದೃಶ್ಯ ಮಾಧ್ಯಮ ಗಳಾಗುತ್ತವೆ. ಆದರೆ ಇಲ್ಲಿ ಯೂಟ್ಯೂಬ್‌ನಲ್ಲಿ ಬಂದ ಅಂಕಣಗಳು ಅಕ್ಷರ ರೂಪಕ್ಕೆ ಇಳಿದಿವೆ. ಪುಸ್ತಕ ರೂಪದಲ್ಲಿ ಇದೀಗ ಓದುಗರಿಗೆ ಲಭ್ಯ. ಇಲ್ಲಿ ಜ್ಞಾನವಿದೆ. ವಿಜ್ಞಾನವಿದೆ, ಹಿರಿಯರ ಮೌಲಿಕ ಮಾತುಗಳಿವೆ. ಚಿಂತನೆಗೆ ಹಚ್ಚುವ ಅಸಾಮಾನ್ಯ ಸಾಮರ್ಥ್ಯ ಈ ಬರಹಗಳಿಗಿದೆ. ಪ್ರಪಂಚದ ಅನೇಕಾನೇಕ ವೈವಿಧ್ಯಗಳನ್ನು ಹಲವು ಮೂಲಗಳಿಂದ ಆಯ್ದು ತಂದು ಜ್ಞಾನದ ತೃಷೆಯನ್ನು ತಣಿಸುವ ಪ್ರಯತ್ನವಿದು. ಕೆಲವು ಬರಹಗಳು ಜಗತ್ತಿನ ಒಳಮುಖದರ್ಶನ ಮಾಡಿಸಿ ವ್ಯಾವಹಾರಿಕವಾಗಿ ನಮ್ಮ ಕಣ್ಣೆರೆಸುತ್ತವೆ. ವೈಜ್ಞಾನಿಕ ಸಿದ್ಧಾಂತಗಳ ಪರಿಚಯವಿದೆ. ವಿಸ್ತಾರವಾಗಿದ್ದುದನ್ನು ಸಂಕ್ಷೇಪಗೊಳಿಸಿ ಹೇಳುವ ಕಲೆ ಲೇಖಕರಿಗೆ ಕರಗತವಾಗಿದೆ. ಎಲ್ಲಿಯೂ ಯಾವುದೂ ಲೋಪವಾಗದೆ ಚೌಕದ್ದೊಂದರಲ್ಲಿ ಹಿಡಿದಿಡುವ ಸಾಹಸ ಈ ಬರವಣಿಗೆಯಲ್ಲಿ ಹಾಸುಹೊಕ್ಕಾಗಿದೆ.
’ಗುರುಪದಾ ಬೇಲೂರ’ ಶ್ರೀ ಗುರುಪದಾಸ್ವಾಮಿ ಬಿ ಜಿ ಅವರ ಕಾವ್ಯನಾಮ. ವೃತ್ತಿಯಿಂದ ಸರ್ಕಾರಿ ಇಂಜಿನಿಯರ್ ಆಗಿರುವ ಗುರುಪಾದ ಸ್ವಾಮಿಯವರ ಹಲವು ಸಣ್ಣ ಕಥೆಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಅವರು ತಮ್ಮ ಸೇವೆಗಳನ್ನು ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತ್ ಮಟ್ಟಕ್ಕೆ ಅಧಿಕಾರಗಳನ್ನು ವಿಕೇಂದ್ರೀಕರಣ ಮಾಡುವ ಹಿಂದಿನ ಉಪಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅವರು ಗ್ರಾಮೀಣ ಸಂಪರ್ಕ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದರು. ಅವರು ವಾಟರ್ ಸೆಕ್ಟರ್ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಇಂಟಿಗ್ರೇಟೆಡ್ ವಾಟರ್ ಸಂಪನ್ಮೂಲ ನಿರ್ವಹಣಾ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ. ಗುರುಪಾದ ಸ್ವಾಮಿಯವರು ತನ್ನ ಕೆಲಸದ ಅನುಭವಗಳನ್ನು ...
READ MORE