ಕಲಾತರಂಗ ಕಲಾಂತರಂಗ

Author : ಅನುಪಮಾ ರಾಘವೇಂದ್ರ



Year of Publication: 2017
Published by: ಭೂಮಿಕಾ ಪ್ರತಿಷ್ಠಾನ
Address: ಉಡುಪಮೂಲೆ(ರಿ.)

Synopsys

ಲೇಖಕಿ ವಿದುಷಿ ಅನುಪಮಾ ರಾಘವೇಂದ್ರ ಅವರ ಸೃಜನಶೀಲ ಕೃತಿ ಕಲಾತರಂಗ ಕಲಾಂತರಂಗ. ಕಲಾವಿದನೊಳಗಿರುವ ಕಲೆಯ ಅನುಭವಗಳು ಲೇಖನಿಯ ಮೂಲಕ ಹೊರಹೊಮ್ಮಿದಾಗ ಅದಕ್ಕೊಂದು ಸಾಮರ್ಥ್ಯಪ್ರಾಪ್ತಿಯಾಗುವುದು. ಕಲೆ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಅನುಪಮಾ ಅವರ ಕಲಾತರಂಗ ಕಲಾಂತರಂಗ ಕೃತಿಯಲ್ಲಿರುವ 42 ಲೇಖನಗಳೇ ಇದಕ್ಕೆ ಸಾಕ್ಷಿ. ಈ ಕೃತಿ ಹಲವು ಕಲಾಭಿವ್ಯಕ್ತಿಯ ಕೈಗನ್ನಡಿಯಂತಿದೆ. ಕಲೆ, ಕಲಾ ಪ್ರಕಾರ, ಮಾಧ್ಯಮ, ಮುದ್ರೆ, ರಂಗ ಪ್ರಯೋಗ ಹೀಗೆ ಹಲವು ಅಂಶಗಳತ್ತ ಬೆಳಕು ಚೆಲ್ಲಿದೆ.

About the Author

ಅನುಪಮಾ ರಾಘವೇಂದ್ರ

ದಕ್ಷಿಣ ಕನ್ನಡದ ಉಡುಪುಮೂಲೆಯವರಾದ ವಿದುಷಿ ಅನುಪಮಾ ರಾಘವೇಂದ್ರ ಭರತನಾಟ್ಯ ಕಲಾವಿದೆ, ನೃತ್ಯ ಶಿಕ್ಷಕಿ, ನೃತ್ಯ ಸಂಯೋಜಕಿ, ಬರಹಗಾರ್ತಿ, ಅಂಕಣಗಾರ್ತಿ, ಕಥಾಗಾರ್ತಿ, ಯಕ್ಷಗಾನ ಕಲಾವಿದೆ, ಅರ್ಥಧಾರಿ ಹಾಗೂ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ.) ಸಂಸ್ಥೆಯ ಸ್ಥಾಪಕಾಧ್ಯಕ್ಷೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇವರ ಹಲವಾರು ಕಥೆ , ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುಪಮಾ ಅವರ ಕಥೆಗಳಿಗೆ 2016 ರ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ , 2017 ರಲ್ಲಿ ಒಪ್ಪಣ್ಣ ಪ್ರತಿಷ್ಠಾನ ಏರ್ಪಡಿಸಿರುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ. ಕೃತಿಗಳು: ನೃತ್ಯ, ಸಂಗೀತ , ಯಕ್ಷಗಾನ ...

READ MORE

Related Books