ಜಿ.ಆರ್. ಎಂದೇ ಖ್ಯಾತರಾಗಿರುವ ಡಾ. ಜಿ. ರಾಮಕೃಷ್ಣ ಪಾಂಡಿತ್ಯ, ಪ್ರತಿಭೆ ಮತ್ತು ಪ್ರತಿಭಟನಾತ್ಮಕ ವ್ಯಕ್ತಿತ್ವಗಳು ಮುಪ್ಪುರಿಗೊಂಡ ಚಿಂತಕ, ಬಹುಶಿಸ್ತೀಯ ಜ್ಞಾನವುಳ್ಳ ಅಖಂಡ ದೃಷ್ಟಿಯ ನಮ್ಮ ನಾಡಿನ ಕೆಲವೇ ವಿಚಾರವಾದಿಗಳಲ್ಲಿ ಇವರೂ ಒಬ್ಬರು. ಇವರ ಈ ನುರಿತ ಹಲವು ಭಿನ್ನ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಕಲನ, ಪರಂಪರೆಯ ಪರಿಷ್ಕರಣೆ, ನಮ್ಮ ಶಿಕ್ಷಣ ನೀತಿಯ ಪರಿಶೀಲನೆ, ಗಾಂಧಿ ಮಾರ್ಕ್. ಲೆನಿನ್ ಏಂಗಲ್ಸ್, ಇವರ ತಾತ್ವಿಕತೆಯ ವಿಶ್ಲೇಷಣೆ, ವೈಚಾರಿಕತೆ, ವೈಜ್ಞಾನಿಕತೆ, ಮಹಿಳೆ, ಯುವಜನತೆ ಹೀಗೆ ಹತ್ತೆಂಟು ವಿಚಾರಗಳನ್ನು ಕುರಿತ ಲೇಖನಗಳು ಇಲ್ಲಿವೆ.
ಪರಾಯ ಶೋಧ ಮತ್ತು ಗುಣಾತ್ಮಕ ಬದಲಾವಣೆಯ ಕಡೆಗಿನ ತಂತ್ರ ಇಲ್ಲಿನ ಬರವಣಿಗೆಯ ಅಂತಃಸತ್ಯವಾಗಿದೆ. ಜಡಗೊಂಡ ಸಾಮಾಜಿಕ ಮಾಧ್ಯಮ ನಂಬಿಕೆ, ಮೌಲ್ಯವ್ಯವಸ್ಥೆ ಮತ್ತು ಪಕ್ಷಪಾತೀಯ ನರಾವಳಿಯನ್ನು ಪ್ರಶ್ನಿಸುತ್ತೆ. ವರ್ತಮಾನಕ್ಕೊಂದು ವಿವೇಕವನ್ನು ಕಟ್ಟಿಕೊಡುವ ಪ್ರತಿಭಟನಾತ್ಮಕ ಆದರೆ ಮಧ್ಯಪ್ರವೇಶ ಗುಣ ಜಿ.ಆರ್. ಬರೆಹದಲ್ಲಿ ಎದ್ದು ಕಾಣುತ್ತದೆ. ವೈಜ್ಞಾನಿಕತೆ ಮತ್ತು ವೈಚಾರಿಕತೆಗಳ ಪ್ರತಿಪಾದನೆ ಇವರಲ್ಲಿ ಸ್ಥಳೀಯ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪ್ರಜೆಗಳಿಂದ ರೂಪಗೊಂಡಿದೆ. ಸಕ್ರಿಯ ಹೋರಾಟಗಾರನಾದ ಬರಹಗಾರನಿಗೆ ಸಹಜವಾಗಿ ಇರುವ ವ್ಯಂಗ್ಯ ಮತ್ತು ವಿಡಂಬನೆ ಇವರ ಬರೆಹದಲ್ಲಿ ಹಾಸುಹೊಕ್ಕಾಗಿದೆ.
ಜಿ. ರಾಮಕೃಷ್ಣ ಸಂಸ್ಕೃತದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳನ್ನೂ, ಪುಣೆ ಹಾಗೂ ವೇಲ್ ವಿಶ್ವವಿದ್ಯಾನಿಲಯಗಳಿಂದ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಗಳನ್ನೂ ಪಡೆದಿದ್ದಾರೆ. ಮಹಾಡಿನ ಡಾ.ಅಂಬೇಡ್ಕರ್ ಕಾಲೇಜು ಮತ್ತು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜುಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸುಮಾರು ಮೂವತ್ತು ವರ್ಷ ಕೆಲಸ ಮಾಡಿದ್ದಾರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದುಕೊಂಡು “ಭಾರತೀಯ ವಿಜ್ಞಾನದ ಹಾದಿ” ಎಂಬ ಮೌಲಿಕ ಕೃತಿಯನ್ನು ರಚಿಸಿದ್ದಾರೆ. ಇವರ “ಮುನ್ನೋಟ' ಹಾಗೂ 'ಆಯತನ' ಗ್ರಂಥಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭ್ಯವಾಗಿದೆ. ಮಾರ್ಕ್ಸ್‌ವಾದಿ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಭಗತ್‌ಸಿಂಗ್, ಚೆ ಗೆವಾರಾ, ...
READ MORE