‘ವೈಚಾರಿಕ ಹಾಗೂ ಇತರೆ ಲೇಖನಗಳು’ ವಂದಗದ್ದೆ ಚಂದ್ರಮೌಳಿ ಅವರ ಲೇಖನಗಳ ಸಂಗ್ರಹವಾಗಿದೆ. ವಂದಗದ್ದೆ ಚಂದ್ರಮೌಳಿಯವರು ಈ ಹಿಂದೆ ಪ್ರಕಟಿಸಿದ ತಮ್ಮ ಆಧ್ಯಾತ್ಮಿಕ ಲೇಖನಗಳ ಕೃತಿಯಂತೆ ಇದೀಗ "ವೈಚಾರಿಕ ಹಾಗೂ ಇತರೆ ಲೇಖನಗಳು" ಕೃತಿಯನ್ನು ಹೊರ ತರುತ್ತಿರುವರು. ನಾನು ತಿಳಿದಂತೆ ಶ್ರೀಯುತರು ಆಧ್ಯಾತ್ಮ ವಿಚಾರಧಾರೆಯಲ್ಲಿ ತುಂಬಾ ಆಸಕ್ತರು. ಗೂಢವೂ ತುಂಬಾ ಕ್ಲಿಷ್ಟಕರವೂ ಆದ ಆಧ್ಯಾತ್ಮ ಹಾಗೂ ವೈಚಾರಿಕ ವಿಚಾರಗಳನ್ನು ಜೀರ್ಣಿಸಿಕೊಂಡು ಅರ್ಥೈಸಿಕೊಳ್ಳು ವಂತೆ ಸರಳ-ಸುಭಗ ಶೈಲಿಯಲ್ಲಿ ಮನಮುಟ್ಟುವಂತೆ ಇಲ್ಲಿ ವಿವರಣೆ ನೀಡಿರುತ್ತಾರೆ. ಓದುಗರು ಈ ದಿಸೆಯಲ್ಲಿ ತಮ್ಮೆಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಆಧ್ಯಾತ್ಮ ನಡೆಯುತ್ತ ಸಾಗಲು ಹಾಗೂ ಮಾರ್ಗ ದರ್ಶನ ಪಡೆಯಲು ಈ ಲೇಖನಗಳು ಹೆಚ್ಚು ಪ್ರಯೋಜನ ಕಾರಿಯಾಗಬಲ್ಲವು. - ವಂದಗದ್ದೆ ಗಣೇಶ್
ವಂದಗದ್ದೆ ಚಂದ್ರಮೌಳಿಯವರು ನಿವೃತ್ತ ಪ್ರಾಂಶುಪಾಲರು. ಅವರು M.Sc,M.A,(kan),M.A(Economics), (M.Com)B.Ed ಪದವೀಧರರಾಗಿರುತ್ತಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಅವರ ಏಳೆಂಟು ಕೃತಿಗಳು ಹೊರಬಂದಿರುತ್ತದೆ. ವಂದಗದ್ದೆ ಚಂದ್ರಮೌಳಿಯವರು ಹೆಚ್ಚಾಗಿ ಆಧ್ಯಾತ್ಮಿಕ ಲೇಖನಗಳನ್ನು ಬರೆಯುತ್ತಾರೆ. ಅವರ ಅನೇಕ ಕವನಗಳು ಪೂಜ್ಯ ಡಿವಿಜಿಯ ಕವನಗಳನ್ನು ಹೋಲುತ್ತವೆ ಹಾಗೆ ಅಂತಹ ತತ್ವಗಳನ್ನೇ ಬೀರುತ್ತವೆ. ಮಧುಕರ ಕೃತಿಯು ಆ ದಿಸೆಯಲ್ಲಿ ಬೆಳಕನ್ನು ಬೀರುತ್ತದೆ. ...
READ MORE