ಬಸವರಾಜಕಾರಣ

Author : ರವಿ ಹಂಜ್

Pages 256

₹ 250.00




Year of Publication: 2022
Published by: ಸಂವಹನ ಪ್ರಕಾಶನ
Address: 12/1ಎ, ಇವ್ ನಿಂಗ್ ಬಜಾರ್ ಹಿಂದುಗಡೆ, ಶಿವರಾಂಪೇಟೆ, ಮೈಸೂರು- 570001
Phone: 2476019

Synopsys

‘ ಬಸವರಾಜಕಾರಣ’ ಕೃತಿಯು ರವಿ ಹಂಜ್ ಅವರ ವೀರಶೈವ ಹಾಗೂ ಲಿಂಗಾಯಿತ ವಿಚಾರಗಳ ಕುರಿತ ಲೇಖನ ಸಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಶೈಲಜ ಇಂ. ಹಿರೇಮಠ ಅವರು, ವೀರಶೈವವು ಲಿಂಗಾಯತ ಧರ್ಮವಾಗಿ ಗುರುತಿಸಲ್ಪಟ್ಟು ಓಟು ಬ್ಯಾಂಕಿನ ಪ್ರಮುಖ ರಾಜಕೀಯ ಅಸ್ತ್ರವಾಗಿ ಪರಿವರ್ತಿತವಾದ ಚರಿತ್ರೆಯ ಚಲನೆಯನ್ನು, ಕಣ್ಣೆದುರಿಗೆ ಕಂಡಿದ್ದೇವೆ. `ಲಿಂಗಾಯಿತ ಧರ್ಮ ಹಿಂದೂ ಧರ್ಮವೇ?' ಎನ್ನುವ ಚರ್ಚೆಯನ್ನು ಹುಟ್ಟುಹಾಕಿ, `ಲಿಂಗಾಯತ ಧರ್ಮ ಹಿಂದೂ ಧರ್ಮವಲ್ಲ' ಎನ್ನುವ ಸಂಶೋಧನಾ ಅಧ್ಯಯನವು ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನುಂಟು ಮಾಡಿ ಗೊಂದಲವನ್ನು ಸೃಷ್ಟಿಸಿತು. ದಾರ್ಶನಿಕರನ್ನು ಜಾತಿಯ ನಾಯಕರನ್ನಾಗಿ ಕಟ್ಟಿಕೊಳ್ಳುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಜಾತಿಯನ್ನು ಕಳೆದುಕೊಂಡವರನ್ನು, ಧರ್ಮವನ್ನು ವಿರೋಧಿಸಿದವರನ್ನು ಪುನಃ ಜಾತಿಗೆ, ಧರ್ಮಕ್ಕೆ ಬಗ್ಗಿಸಿ ಅವರನ್ನು ಜಾತಿ ನಾಯಕರನ್ನಾಗಿ, ಧಾರ್ಮಿಕ ನಾಯಕರನ್ನಾಗಿ ನಿರೂಪಿಸಿದ್ದರ ಫಲವೇ, ನಾಯಕರ ಹೆಸರಿನಲ್ಲಿ ಜಾತಿ, ಧರ್ಮ, ಸಂಘಟನೆಗಳು, ಮಠಗಳು ಹುಟ್ಟಿಕೊಂಡು ಸಾಮಾಜಿಕ ವಿಕಾಸಕ್ಕೆ ತಡೆಗೋಡೆಯಾಗಿ ನಿಂತಿವೆ. ಅದನ್ನು ನಿರಚನಗೊಳಿಸುವ ಅಗತ್ಯವಿದೆ: ಈ ದಿಸೆಯಲ್ಲಿ ಯಾವುದೇ ಅಧ್ಯಯನಗಳು ಕನ್ನಡದಲ್ಲಿ ನಡೆದಿಲ್ಲ. ಇಂತಹ ಬಹುದೊಡ್ಡ ಸಾಹಸವನ್ನು ರವಿ ಹಂಜ್ ಅವರು ಮಾಡಿದ್ದಾರೆ. ಅವರಿಗಿರುವ ಎರಡು ಬಹುದೊಡ್ಡ ಕ್ವಾಲಿಟಿಗಳು ಇದುವರೆಗಿನ ಅಧ್ಯಯನ ಮಿತಿಯನ್ನು ದಾಟಲು ಸಹಾಯಕ್ಕೆ ಒದಗಿ ಬಂದಿದೆ; ಅವುಗಳೆಂದರೆ: 1. ಮುಖ್ಯವಾಗಿ ಅವರಿಗೆ ಮಾನವ ವಿಕಾಸ ಹಾಗೂ, ಮಾನವ ವಲಸೆ ವಿಕಾಸದ ಬಗ್ಗೆ ಅಪಾರವಾದ ಜ್ಞಾನವಿರುವುದು. 2.. ಅನಿವಾಸಿ ಭಾರತೀಯನಾಗಿರುವುದು. ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ ಎಂದಿದ್ದಾರೆ.

About the Author

ರವಿ ಹಂಜ್

ಬರಹಗಾರ, ಮ್ಯಾನೇಜ್‌ಮೆಂಟ್ ತಜ್ಞ ರವಿ ಹಂಜ್ ಮೂಲತಃ ಮೈಸೂರಿನವರು. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಹಾವರ್ಡ್‌ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಎಸೆನ್ಶಿಯಲ್ ಕೋರ್ಸ್‌‌ ಹಾಗೂ ಚಿಕಾಗೋದ ಡೆಪೌಲ್ ವಿಶ್ವವಿದ್ಯಾಲಯದಲ್ಲಿ ವೆಬ್ ಕಾಮರ್ಸ್ ಕೋರ್ಸ್‌ ಪ್ರಮಾಣ ಪತ್ರ ಪಡೆದದ್ದಾರೆ.  ಪ್ರಸ್ತುತ ಮ್ಯಾನೇಜ್‌ಮೆಂಟ್ ತಜ್ಞರಾಗಿ ಚಿಕಾಗೋದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಇವರ ನೆಚ್ಚಿನ ಹವ್ಯಾಸಗಳಲ್ಲಿ ಬರವಣಿಗೆ ಕೂಡ ಒಂದು. ಪೂರ್ಣ ಚಂದ್ರ ತೇಜಸ್ವಿ ಅವರಿಂದ ಸ್ಫೂರ್ತಿ ಪಡೆದಿರುವ ಇವರು ಕನ್ನಡದ ದಿನಪತ್ರಿಕೆಗಳಿಗೆ ಲೇಖನ, ಅಂಕಣಗಳನ್ನು ಬರೆದಿದ್ದಾರೆ.  ಹುಯನ್ ತ್ಸಾಂಗ್‌ನ ಮಹಾಪಯಣ, ಭಾರತ ಒಂದು ಮರುಶೋಧನೆ ಇವರ ಪ್ರಮುಖ ಕೃತಿಗಳು. ...

READ MORE

Related Books