ಸಾಹಿತ್ಯ ಮತ್ತು ಸಮಾಜ

Author : ಕಗ್ಗೆರೆ ಪ್ರಕಾಶ್

Pages 152

₹ 150.00




Year of Publication: 2022
Published by: ಕಗ್ಗೆರೆ ಪ್ರಕಾಶನ
Address: # 15/375, ಸ್ನೇಹ ಕಾರಂಜಿ, ಕೆಂಪೇಗೌಡ ನಗರ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಾಗಡಿ ಮುಖ್ಯರಸ್ತೆ, ವಿಶ್ವನೀಡಮ್ ಅಂಚೆ, ಬೆಂಗಳೂರು -560 091
Phone: 9663412986

Synopsys

ಕಗ್ಗೆರೆ ಪ್ರಕಾಶ್ ಅವರ ಸಂಪಾದಿತ ಕೃತಿ `ಸಾಹಿತ್ಯ ಮತ್ತು ಸಮಾಜ’. ಕಗ್ಗೆರೆ ಪ್ರಕಾಶ್ ಅವರು ಸಂಪಾದಕರಾಗಿ ಪ್ರಕಟಿಸುತ್ತಿದ್ದ ಅನಂತ, ಭೂಮಿಕೆ ಸಾಹಿತ್ಯ ಪತ್ರಿಕೆಯಲ್ಲಿ ಬಂದ ಮೌಲಿಕ ಬರಹಗಳನ್ನು ಇಲ್ಲಿ ಸಂಕಲಿಸಿದ್ದಾರೆ. ನಲವತ್ತೊಂದು ವಿವಿಧ ಲೇಖಕರ ವಿಚಾರ ವಿಮರ್ಶೆಯ ಬರಹಗಳಿವೆ. ಹಿರಿಯ ತಲೆಮಾರಿನ ಲೇಖಕರಿಂದ ಹಿಡಿದು ಹೊಸ ಪೀಳಿಗೆಯ ಬರಹಗಾರರ ವೈಚಾರಿಕ ಲೇಖನಗಳು ಇಲ್ಲಿರುವುದು ವಿಶೇಷ. ಇಲ್ಲಿರುವ ಎಲ್ಲ ಬರಹಗಳು ಹೊಸತನದ ಆಡುನುಡಿಯ ಅಭಿವ್ಯಕ್ತಿಯಾಗಿವೆ. ಪ್ರಸಿದ್ಧ ಸಾಹಿತಿಗಳಾದ ಡಾ. ರಾಮೇಗೌಡ, ಡಾ. ಸಿ.ಪಿ. ಕೃಷ್ಣಕುಮಾರ್, ಡಾ. ಕೆ.ಎಸ್. ಭಗವಾನ್, ಡಾ. ಕೆ. ಲೀಲಾಪ್ರಕಾಶ್, ಡಾ. ದೊಡ್ಡರಂಗೇಗೌಡ, ಡಾ. ಧರಣಿದೇವಿ ಮಾಲಗತ್ತಿ, ಡಾ. ತಿಪ್ಪೇಸ್ವಾಮಿ, ಲಿಂಗದೇವರು ಹಳೆಮನೆ, ಚಿತ್ರಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿ, ಬಿ.ಡಿ. ಜಗದೀಶ್ ಅವರಂಥ ಅಪರೂಪದ ಲೇಖನಗಳು ಇಲ್ಲಿ ದಾಖಲಾಗಿರುವುದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಅನಾದಿ ಕಾಲದಿಂದಲೂ ಸಾಹಿತ್ಯಕ್ಕೂ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿನ ಕಾಲದ ಸಮಾಜ ಕೂಡ ಸಾಹಿತ್ಯದಿಂದ ಹೊರತಾಗಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಸಾಹಿತ್ಯವು ಸಮಾಜವನ್ನು ಬೆಸೆಯುತ್ತಾ ಬಂದಿದೆ. ಇಂಥ ಸಂಬಂಧ ಸೂಚಕವಾಗಿಯೇ ‘ಸಾಹಿತ್ಯ ಮತ್ತು ಸಮಾಜ’ ಅಂತ ಈ ಪುಸ್ತಕಕ್ಕೆ ಹೆಸರಿಡಲಾಗಿದೆ. ಓದುಗರು ಇದು ನಮ್ಮ ಪುಸ್ತಕ ಎಂದು ಎದೆಯ ಹತ್ತಿರಕ್ಕೆ ತಂದುಕೊಳ್ಳುವ ಹಾಗಿದೆ. ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

ಸಾಹಿತ್ಯ ಮತ್ತು ಸಮಾಜ, ಕಾಳೀದಾಸ, ಮೈಸೂರು ಜಾನಪದ ವಸ್ತು ಸಂಗ್ರಹಾಲಯ, ಅನ್ನ ದೇವರು ಮಾತ್ರ ಇನ್ನೂ ಬರಲಿಲ್ಲೊ, ನನ್ನ ದೃಷ್ಟಿಯಲ್ಲಿ ಚಿತ್ರಕಲೆ, ಇವಳು ಛಲಗಾತಿ ಹುಡುಗಿ, ಬೆಂಗಳೂರು ಕೆಂಪೇಗೌಡ ಏರ್‌ ಪೋರ್ಟ್‌, ಕಲೆ ಹಾಗೂ ಶೃಂಗಾರ, ಪಾಪುಗೊಂದು ಬಹಿರಂಗ ಪತ್ರ, ನಾವು ತಬ್ಬಲಿಗಳಾಗುವ ಆತಂಕ, ಕಾವ್ಯದಲ್ಲಿ ಧ್ವನಿಯ ಪಾತ್ರ, ಪ್ರೀತಿ ಸಂಬಂಧ ಕೆಲ ಪಾತ್ರಗಳು, ಪೈಲಟ್‌ ಹೆಂಡತಿ ಈಗ ಬಿಕ್ಷುಕಿ, ಬುದ್ದ ನನ್ನೊಳಗೆ ಏನೆಲ್ಲಾ ಮಾಡಿಬಿಟ್ಟ, ನೆಹರೂ ನೆನಪೊಂದೇ ಸಾಕೇ, ಧೀಮಂತ ವ್ಯಕ್ತಿ, ಸಾಹಿತ್ಯ ಸಂಗೀತದ ಸಮೀಪ ಮುಂತಾದ ಲೇಖಕನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ಕಗ್ಗೆರೆ ಪ್ರಕಾಶ್
(01 June 1971)

ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...

READ MORE

Related Books