ಲೇಖಕಿ ಬಿ.ಎಂ. ರೋಹಿಣಿ ಅವರ ಕೃತಿ ʻವೇಶ್ಯಾವಾಟಿಕೆಯ ಕಥೆ-ವ್ಯಥೆʼ. ಪುಸ್ತಕವು ವೇಶ್ಯಾವೃತ್ತಿಯ ಇತಿಹಾಸ, ಅದರ ಹಿಂದಿರುವ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು, ಸಂಬಂಧಿಸಿದ ಕಾನೂನು, ಚಳುವಳಿಗಳು, ದೇವದಾಸಿ ಪದ್ಧತಿ ಎಲ್ಲವನ್ನೂ ವಿಶ್ಲೇಷಿಸುತ್ತದೆ. ಲೇಖಕಿ ಇಲ್ಲಿ ವೇಶ್ಯೆಯರನ್ನು ಮುಖತಃ ಸಂದರ್ಶಿಸಿ ಅವರು ವೇಶ್ಯಾವೃತ್ತಿಯ ಬಲೆಗೆ ಬೀಳಲು ಕಾರಣ ಏನು ಎಂಬುದನ್ನು ವಿವರವಾಗಿ ದಾಖಲಿಸಿದ್ದಾರೆ. ಚಿಂತನೆಗೆ ಈಡು ಮಾಡುವ, ಹೃದಯ ಭಾರವಾಗುವಂತೆ ಮಾಡುವ ಅನೇಕ ಕಣ್ಣೀರ ಕತೆಗಳು ಇಲ್ಲಿವೆ. ವೇಶ್ಯೆಯರ ಪುನರ್ವಸತಿಗೆ ಕೆಲಸ ಮಾಡುವವರಿಗೂ ಅನೇಕ ಉಪಯುಕ್ತ ಮಾಹಿತಿಗಳು ಇಲ್ಲಿವೆ.
ರೋಹಿಣಿ ಬಿ.ಎಂ., ಎಂ.ಎ.(ಕನ್ನಡ) ಹಿಂದಿ(ಪ್ರವೀಣ) ಶಿಕ್ಷಣ ಪಡೆದ ಇವರು ನಿವೃತ್ತ ಶಿಕ್ಷಕಿ. 1944ರ ಏಪ್ರಿಲ್ 06 ರಂದು ಬಂಗ್ರ ಮಂಜೇಶ್ವರ ಕಾಸರಗೋಡಿನಲ್ಲಿ ಜನಿಸಿದರು. ತಂದೆ ಟಿ. ಕೊಗ್ಗಪ್ಪ, ತಾಯಿ ಬಿ.ಎಂ. ದೇವಕಿ. ಈಗ ಕೇರಳಕ್ಕೆ ಸೇರಿದ ಕಾಸರಗೋಡಿನ ಬಂಗ್ರಮಂಜೇಶ್ವರದ ಬಿ.ಎಂ.ರೋಹಿಣಿ ಓದಿದ್ದು ಮಂಗಳೂರಿನಲ್ಲಿ. ಟಿ.ಸಿ.ಹೆಚ್, ತರಬೇತಿ ಪಡೆದು ಶಿಕ್ಷಕಿಯಾಗಿದ್ದವರು (1964-2002), ನಿವೃತ್ತಿಯ ನಂತರ ತುಳಿತಕ್ಕೆ ಒಳಗಾದವರ ಬದುಕು ಬವಣೆಗಳ ಅಧ್ಯಯನ ಮತ್ತು ಸಂಸ್ಕತಿ ಸಂಶೋಧನೆಯಲ್ಲಿ ತೊಡಗಿಸಿಕೊಂಡು ಮಂಗಳೂರಿನ `ಡೀಡ್' ಸಂಸ್ಥೆಯ ಮೂಲಕ ವೇಶ್ಯಾಜೀವನದ ಅಧ್ಯಯನ ನಡೆಸಿದರು. ಆಮೇಲೆ ಗುಲಾಬಿ ಬಿಳಿಮಲೆಯವರ ಜೊತೆ ಸೇರಿ ದ.ಕ ಜಿಲ್ಲಾ ಮಹಿಳಾ ಕಾರ್ಮಿಕರ ಹೋರಾಟವನ್ನು ...
READ MORE