ಲಿಂಗಾಯತ ಚಳುವಳಿ

Author : ಚಿನ್ನವ್ವ ಚಂದ್ರಶೇಖರ ವಸ್ತ್ರದ

Pages 249

₹ 200.00




Year of Publication: 2018
Published by: ಡಾ,ಎಂ ಎಂ ಕಲಬುರಗಿ ಅದ್ಯಯನ ಸಂಸ್ಥೆ

Synopsys

ಲಿಂಗಾಯತ ಎನ್ನುವುದು ಕೇವಲ ಮತೀಯ ಚಳುವಳಿಯಲ್ಲ,ದಾರ್ಮಿಕ ಹಿನ್ನೆಲೆಯಲ್ಲಿ ನಡೆದ ಹೋರಾಟವಲ್ಲ,ಅದು ದಾರ್ಮಿಕದ ಜೊತೆಗೆ ಸಾಮಾಜಿಕ, ನೈತಿಕ, ಆರ್ಥಿಕ, ತಾತ್ವಿಕ ರಂಗದಲ್ಲಿ ನಡೆದ ಉತ್ಕ್ರಾಂತಿ ಎಂಬುದನ್ನು ಲೇಖಕರು ಇಲ್ಲಿ ಆದಾರಪೂರ್ವಕವಾಗಿ ಛರ್ಚಿಸಿದ್ದಾರೆ.ಜಾಗತಿಕ ದರ್ಮಗಳಾದ ಕ್ರಿಶ್ಚಿಯನ್, ಇಸ್ಲಾಂ,ಝರತುಷ್ಟ್ರ,ಬೌದ್ದ, ಜೈನ,ಸಿಖ್ ದರ್ಮಗಳ ಜೋತೆಗೆ ಲಿಂಗಾಯತ ದರ್ಮದ ತೌಲನಿಕ ಅದ್ಯಯನ ನಡೆಸಿ ಲಿಂಗಾಯತದ ವಿಶೇಷತೆಯನ್ನು ಸ್ಪಷ್ಟವಾಗಿ ಕಂಡರಿಸಿದ್ದಾರೆ.ಇದು ಈ ಕೃತಿಯ ಹೆಚ್ಚುಗಾರಿಕೆ,ಸಮಾಜಶಾಸ್ತ್ರ, ಮನಃಶಾಸ್ತ್ರ, ರಾಜ್ಯಶಾಸ್ತ್ರ,ಇತಿಹಾಸ,ಅರ್ಥಶಾಸ್ತ್ರ ಗಳಲ್ಲದೇ ಪೌರ್ವಾತ್ಯ-ಪಾಶ್ಚಾತ್ಯ ತತ್ವ ಚಿಂತನೆಗಳ ಹಿನ್ನೆಲೆಯಲ್ಲಿ ಲಿಂಗಾಯತ ತತ್ವ ಸಿದ್ದಾಂತವನ್ನು ಚರ್ಚಿಸಿ ಇದರ ಹಿರಿಮೆಯನ್ನು ಪ್ರತಿಪಾದಿಸಿರುವುದು ಈ ಕೃತಿಯ ಇನ್ನೊಂದು ಮಹತ್ವದ ಅಂಶ .ಶಂಕರಾಚಾರ್ಯರನ್ನು ಮೊದಲ್ಗೊಂಡು ಡಾ,ರಾಧಾಕೃಷ್ಣನ್ ವರೆಗೆ,ಪ್ಲೇಟೋನನ್ನು ಮೊದಲ್ಗೊಂಡು ಕಾರ್ಲ್ ಮಾರ್ಕ್ಸ್ ವರೆಗೆ ಅನೇಕ ತತ್ವ ಶಾಸ್ತ್ರಜ್ಞರ ಚಿಂತನೆಗಳನ್ನು, ವೈಜ್ಞಾನಿಕ ವಿದಾನದ ಅದ್ಯಯನಕ್ಕೆ ಒಳಪಟ್ಟಿದೆ.ಈ ಕೃತಿಯನ್ನು ಪ್ರಖ್ಯಾತ ಚಿಂತಕ ಎಂ ಎನ್ ರಾಯ್ ಅವರ ಪ್ರಶಂಸೆಗೆ ಪಾತ್ರವಾಗಿದೆ.

About the Author

ಚಿನ್ನವ್ವ ಚಂದ್ರಶೇಖರ ವಸ್ತ್ರದ

ಚೆನ್ನವ್ವ ಚಂದ್ರಶೇಖರ ವಸ್ತ್ರದ ಅವರು ಅಣ್ಣಿಗೇರಿಯ ಎಸ್.ಎ.ಪಿ.ಯು.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಶಾಂತಿನಾಥ ದೆಸಾಯಿಯವರ Bhabani Bhattacharya ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅಲ್ಲದೆ ಹೊಮೆನ್ ಬೊರ್ಗೊಹೈನ್ ಅವರ The Sunset ಕೃತಿಯನ್ನು ಸೂರ್ಯಾಸ್ತ ಎಂಬ ಶಿರೋನಾಮೆಯಲ್ಲಿ ಅನುವಾದಿಸಿದ್ದಾರೆ. ಡಾ. ಎಸ್. ಎಂ. ಹುಣಶ್ಯಾಳರ The Lingayat Movement ಕೃತಿಯನ್ನು ಅವರು ಅನುವಾದಿಸಿದ್ದು, ಲಿಂಗಾಯತ ಚಳುವಳಿ ಎಂಬ ಶಿರೋನಾಮೆಯಲ್ಲಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಪೀಠ, ಗದಗದಿಂದ ಪ್ರಕಟವಾಗಿದೆ. ...

READ MORE

Related Books