ಸಾಮಾನ್ಯರಲ್ಲಿಯೂ ಅಸಾಮಾನ್ಯ ಸಾಧನೆಗೈದವರ ಬಗ್ಗೆ ಗಮನಿಸಿ ಸಂದರ್ಶನ ಮಾಡಿ ಬರೆದ ಲೇಖನಗಳ ಸಂಗ್ರಹ ಇದು. ವಿಜಯವಾಣಿ ಪತ್ರಿಕೆಗೆ 'ಸಾಂಗತ್ಯ' ಎನ್ನುವ ಹೆಸರಿನಲ್ಲಿ ಅಂಕಣ ಬರಹವಾಗಿ ಪ್ರಕಟವಾದ ಲೇಖನಗಳಿವು. ವಿಭಿನ್ನ ಮಹಿಳೆಯರ ಬಗ್ಗೆ ನುಡಿಚಿತ್ರವಾಗಿ ಕಟ್ಟಿಕೊಟ್ಟ ಲೇಖನಗಳು ಗುಚ್ಛವಾಗಿ ಈ ಪುಸ್ತಕದಲ್ಲಿ ಪ್ರಕಟವಾಗಿದೆ. ಪುಸ್ತಕದಲ್ಲಿ ಕಂಡ ಮಹಿಳೆಯರ ಧೀಮಂತ ಬದುಕು ಹಲವರಿಗೆ ಸ್ಪೂರ್ತಿ ಸೆಲೆಯೂ ಆಗಬಲ್ಲದು.
ಮಾಲತಿ ಹೆಗಡೆ ಮೂಲತಃ ಉತ್ತರ ಕನ್ನಡದವರು. ಸದ್ಯಕ್ಕೆ ಮೈಸೂರು ನಿವಾಸಿ. ಬಿ. ಎ ಪದವೀಧರೆ. ಹಾಡುವುದು ಬರೆಯುವುದು, ಓದುವುದು, ಕೈತೋಟದಲ್ಲಿ ಗಿಡಗಳನ್ನು ಬೆಳೆಸುವುದು ಪ್ರೀತಿಯ ಹವ್ಯಾಸ. ಪ್ರಜಾವಾಣಿಯಲ್ಲಿ 'ವಿಭಿನ್ನ ನೋಟ ವಿಶಿಷ್ಟ ತೋಟ' 'ಮನೆ ಊಟ ಮನೆ ಮದ್ದು' 'ದೇಸಿ ಅಡುಗೆ'..ಅಂಕಣ ಬರಹ ಪ್ರಕಟವಾಗಿದೆ. ವಿಜಯವಾಣಿಯಲ್ಲಿ 'ಸಾಂಗತ್ಯ' ಅಂಕಣ ಬರಹ ಪ್ರಕಟವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಕರ್ಮವೀರ ಸುಧಾ...ಇವುಗಳಲ್ಲಿ ಕೃಷಿ, ಪರಿಸರ, ಮಹಿಳೆಯರ ಕುರಿತಾದ ಲೇಖನಗಳು, ಕಥೆ, ಕವಿತೆ, ಗಜಲ್ಗಳು ಪ್ರಕಟವಾಗಿವೆ. 'ವನಿತೆಯರ ಆತ್ಮಶ್ರೀ'( ಸಾಧಕಿಯರ ಬಗ್ಗೆ ಬರೆದ ಅಂಕಣಬರಹಗಳ ಸಂಗ್ರಹ) 'ನೆಲದ ...
READ MORE