ಧ್ವಜವೆಂದರೆ ಬಟ್ಟೆಯಲ್ಲ

Author : ಜಿ.ಆರ್. ಸಂತೋಷ್

Pages 400

₹ 293.00




Year of Publication: 2016
Published by: ಸಮೃದ್ಧ ಸಾಹಿತ್ಯ
Address: #121, 2ನೇ ಮುಖ್ಯರಸ್ತೆ, ವಿಠಲ್ ನಗರ, ಹನುಮಂತನಗರ, ಆಜಾದ್ ನಗರ, ಬೆಂಗಳೂರು- 560026

Synopsys

ಲೇಖಕ ಜಿ.ಆರ್. ಸಂತೋಷ್ ಅವರ ಕೃತಿ-ಧ್ವಜವೆಂದರೆ ಬಟ್ಟೆಯಲ್ಲ. ವೇದಗಳಿಂದ ವಿವಾದಗಳವರೆಗೆ ಸಾಗಿ ಬಂದ ಧ್ವಜದ ಹಾದಿಯನ್ನು ವಿಶ್ಲೇಷಿಸಿರುವುದಾಗಿ ಕೃತಿಯ ಉಪಶೀರ್ಷಿಕೆ ಹೇಳುತ್ತದೆ. ಭಾರತದ ಸಂಸ್ಕೃತಿ ತುಂಬಾ ಪ್ರಾಚೀನ. ಧ್ವಜವೂ ಸಹ ಒಂದು ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ದೇಶದ ಸ್ವತಂತ್ರತೆಯನ್ನು ಧ್ವಜದ ಮೂಲಕ ಕಾಣಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಧ್ವಜದ ಮಹತ್ವ, ಅದು ಸಾಗಿ ಬಂದ ಇತಿಹಾಸ, ಸದ್ಯ, ಅದಕ್ಕೊದಗಿದ ಸ್ಥಿತಿ ಎಲ್ಲವನ್ನೂ ಸುದೀರ್ಘವಾಗಿ ಚರ್ಚಿಸಿದ ವಿಚಾರಗಳ ಸಂಕಲನವಿದು. ಪುರಾಣ ಕಾಲದಿಂದ ಹಿಡಿದು ಆಧುನಿಕ ಕಾಲದ ವರೆಗೆ ನಮ್ಮಲಿದ್ದ ಧ್ವಜದ ಕುರಿತ ಕಲ್ಪನೆಗಳು, ಅದು ಪಡೆದ ರೂಪಗಳು, ರಾಮಾಯಣ, ಮಹಾಭಾರತದ ಧ್ವಜದ ಕಥನಗಳು ಇಲ್ಲಿವೆ. ಚರಿತ್ರೆಯ ಕಾಲದಲ್ಲಿನ ವೀರರಸ ಪೂರ್ಣ ಕೀರ್ತಿಕಥಾನಕಗಳು ಅದರಲ್ಲೂ ಕನ್ನಡನಾಡಿನಲ್ಲಿ ಮೆರೆದ ರಾಜವಂಶಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಧ್ವಜದ ರಕ್ಷಣೆಗಾಗಿ ನಡೆದ ತ್ಯಾಗ ಬಲಿದಾನಗಳ ಚಿತ್ರಣವೂ ಇಲ್ಲಿದೆ. ಆರೆಸ್ಸೆಸ್, ಜೆಎನ್‌ಯು, ಕಾಶ್ಮೀರ ಇತ್ಯಾದಿ ತೀರಾ ಪ್ರಸ್ತುತವೆನ್ನುವ ಸಂಗತಿಗಳೂ ಸೇರಿ ಪುಸ್ತಕವನ್ನು ಸಮಗ್ರವನ್ನಾಗಿಸಿದೆ. 

About the Author

ಜಿ.ಆರ್. ಸಂತೋಷ್

ಲೇಖಕ ಜಿ.ಆರ್. ಸಂತೋಷ ಅವರು ಬೆಂಗಳೂರಿನವರು. ಭಾರತೀಯ ಸಂಸ್ಕೃತಿಯ ಆಸಕ್ತರು. ಈ ಕುರಿತು ಹತ್ತು ಹಲವು ಬರಹಗಳನ್ನು ಬರೆದಿದ್ದು, ಬೆಂಗಳೂರು ಆಕಾಶವಾಣಿಯಿಂದ ಪ್ರಸಾರಗೊಂಡಿವೆ. ಆಫ್ರಿಕಾದ ತಾಂಜೇನಿಯಾ ದೇಶದಲ್ಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ನಿರ್ದೇಶಕರಾಗಿದ್ದರು. ಧ್ವಜವೆಂದರೆ ಬಟ್ಟೆಯಲ್ಲ ಎಂಬುದು ಇವರ ಲೇಖನಗಳ ಸಂಕಲನ. ...

READ MORE

Related Books