ನೂರೊಂದು ನೆನಪು ನ್ಯೂರಾನಿನಿಂದ

Author : ಟಿ.ಜಿ. ಶ್ರೀನಿಧಿ

Pages 172

₹ 200.00




Year of Publication: 2023
Published by: ಸಾವಣ್ಣ ಎಂಟರ್‌ಪ್ರೈಸಸ್‌
Address: ನಂ. 12, ಭೈರಸಂದ್ರ ಮುಖ್ಯರಸ್ತೆ, ಜಯನಗರ 1ನೇ ಬ್ಲಾಕ್‌ ಪೂರ್ವ, ಬೆಂಗಳೂರು-560011
Phone: 080-41229757/ 9036312786

Synopsys

ಕೊಡಗಿನ ಮಳೆಗಾಲಕ್ಕೂ ಬೆಂಗಳೂರಿನ ಹೋಟಲ್ ಚಟ್ನಿಗೂ ಅಂತರಜಾಲದ ಸಮಸ್ಯೆಗಳಿಗೂ ಏನು ಸಂಬಂಧ? ಹಳ್ಳಿಯಿಂದ ಬಂದ ಹುಡುಗ ಸಿಟಿ ಬಸ್ಸಿನಲ್ಲಿ ನಿದ್ದೆಮಾಡಿದ ಹಾಗೆ ವಿಮಾನದ ಪೈಲಟ್ಟುಗಳೇ ನಿದ್ದೆಮಾಡಿದರೆ ಏನಾಗುತ್ತದೆ? "ಈ ಪತ್ರವನ್ನು ಇಪ್ಪತ್ತೊಂದು ಜನಕ್ಕೆ ಕಳುಹಿಸಿ" ಎನ್ನುತ್ತಿದ್ದವರು ಈಗಲೂ ಇದ್ದಾರೆಯೇ? ಗೋಡೆಗೆ ಹಚ್ಚುತ್ತಿದ್ದ ಸುಣ್ಣ ಎಲ್ಲಿ, ಅಮೆರಿಕಾದಲ್ಲಿ ಕಂಡುಹಿಡಿದಿರುವ ಅಚ್ಚಬಿಳಿ ಬಣ್ಣ ಎಲ್ಲಿ? ದಕ್ಷಿಣ ಕೊಡಗಿನ ಶ್ರೀಮಂಗಲ ಎಂಬ ಪುಟ್ಟ ಊರಿನಲ್ಲಿ ದಶಕಗಳ ಹಿಂದೆ ಕಳೆದ ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಇಂದಿನ ಬೆಳವಣಿಗೆಗಳನ್ನು ಪರಿಚಯಿಸುವ ಈ ಬರಹಗಳು ಕನ್ನಡ ವಿಜ್ಞಾನ ಸಾಹಿತ್ಯ ಲೋಕದಲ್ಲೊಂದು ವಿನೂತನ ಪ್ರಯೋಗ. ಇಲ್ಲಿನ ಬರಹಗಳನ್ನು ಓದುತ್ತಾ ಹೋದಂತೆ ನಿಮ್ಮೆದುರು ಹೊಸದೊಂದು ಜಗತ್ತೇ ತೆರೆದುಕೊಳ್ಳುತ್ತದೆ, ಮುಂದಿನ ರಜೆಯಲ್ಲಿ ಶ್ರೀಮಂಗಲವನ್ನೊಮ್ಮೆ ನೋಡಿ ಬರೋಣ ಎಂದೂ ಅನ್ನಿಸುತ್ತದೆ. ಅಂದಿನ ನೆನಪುಗಳ ಜೊತೆಗೆ ಇಂದಿನ ತಂತ್ರಜ್ಞಾನದ ಜುಗಲ್‌ಬಂದಿ. ಅದನ್ನು ನಿಮಗೆ ತಲುಪಿಸಲಿರುವ ಪುಸ್ತಕವೇ 'ನೂರೊಂದು ನೆನಪು ನ್ಯೂರಾನಿನಿಂದ'!

About the Author

ಟಿ.ಜಿ. ಶ್ರೀನಿಧಿ

ಟಿ.ಜಿ. ಶ್ರೀನಿಧಿ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಉದ್ಯೋಗ ಮಾಡುತ್ತಿದ್ಧಾರೆ.  ವಿಜ್ಞಾನ-ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವುದು ಇವರ  ಅಚ್ಚುಮೆಚ್ಚಿನ ಹವ್ಯಾಸ. ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ 'ಇಜ್ಞಾನ ಡಾಟ್ ಕಾಮ್' (www.ejnana.Com) ನ ರೂವಾರಿ. ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳು ಈವರೆಗೆ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿಯಲ್ಲಿ 'ವಿಜ್ಞಾಪನೆ' ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. 'ಶ್ರೀನಿಧಿಯ ಪ್ರಪಂಚದಲ್ಲಿ (WWW.Srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ...

READ MORE

Related Books