ಸಮಾಜಮುಖಿ ಸಂಪುಟ- 2

Author : ಡಿ.ಎಸ್. ವೀರಯ್ಯ

Pages 800

₹ 2000.00




Year of Publication: 2021
Published by: ಪಿತಾಮಹ ಪ್ರಕಾಶನ
Address: #73, ಬನಶಂಕರಿ 3ನೇ ಹಂತ, ಬಿಡಿಎ ಲೇಔಟ್, 8ನೇ ಮುಖ್ಯ ರಸ್ತೆ, ಗಿರಿನಗರ ಬೆಂಗಳೂರು- 560085
Phone: 08026743078

Synopsys

‘ಸಮಾಜಮುಖಿ’ ಕೃತಿಯು ಡಿ.ಎಸ್. ವೀರಯ್ಯ ಅವರ ಸಮಗ್ರ ಬರಹಗಳ ಸಂಪುಟ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ:”ಡಿ.ಎಸ್.ವೀರಯ್ಯ ಅವರ 'ಸಾಹಿತ್ಯಮುಖಿ' ಮತ್ತು 'ಸಮಾಜಮುಖಿ' ಮಹಾಸಂಪುಟಗಳು ಕರ್ನಾಟಕದ ಅಭಿವೃದ್ಧಿ ಪರ್ವದ ಸಂದರ್ಭದಲ್ಲಿ ಮಾರ್ಗದರ್ಶಿಸೂತ್ರಗಳನ್ನು ತಂದುಕೊಡುವ ಬೆಲೆಯನ್ನು ಪಡೆದಿವೆಯೆಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಇವರ ಸಮಗ್ರ ಬರಹಗಳ ಹಿಂದೆ ಹತ್ತಾರು ವರ್ಷಗಳ ಚಿಂತನೆ ಮಡುಗಟ್ಟಿದೆ. ಕರ್ನಾಟಕ ಸಾಮಾಜಿಕ ಇತಿಹಾಸದ ವರ್ತಮಾನ ಚರಿತ್ರೆಯನ್ನು ವೀರಯ್ಯನವರು ಧ್ಯಾನಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀ ಇವರ ಚಿಂತನೆಗಳು ಕೇವಲ ತಾತ್ವಿಕ ಮಟ್ಟದಲ್ಲಿ ನೋಡಿದರೆ ಸಾಲದು, ಅನ್ವಯಕ ನೆಲೆಯಲ್ಲಿ ಪರಿಭಾವಿಸುವ ಕ್ರಮಗೊಳಿಸುವ ಅಗತ್ಯವಿದೆಯೆಂಬುದನ್ನು ವೀರಯ್ಯನವರು ತಮ್ಮ ಲೇಖನಗಳ ಉದ್ದಕ್ಕೂ ಸಾದರಪಡಿಸುತ್ತಾರೆ. ಇವರ ಚಿಂತನಕ್ರಮ, ನೇರದೃಷ್ಟಿ, ಸತ್ಯಾಗ್ರಹ, ಪ್ರತಿಭಟನೆ ಮುಂತಾದುವು ತೋರುಗಾಣಿಕೆಯಲ್ಲ. ಅವು ಸಾಮಾಜಿಕ ಜೀವಕೇಂದ್ರಗಳೆಂಬುದನ್ನು ಅಡಿಗಡಿಗೂ ಡಿ.ಎಸ್.ವೀರಯ್ಯ ಎತ್ತಿತೋರಿಸಿದ್ದಾರೆ. ನಾವೀಗ ತ್ರಿಕರಣಗಳ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಅವುಗಳಿಂದ ನಾವು ಪಾರಾಗಿ 'ಆತ್ಮನಿರ್ಧಾರ ಭಾರತ'ವನ್ನು ಕಟ್ಟಬೇಕಾಗಿದೆ. ವೀರಯ್ಯ ಅವರ ಒಟ್ಟು ಬರೆಹಗಳಲ್ಲಿ ಮೋದಿ ಅವರು ಹೇಳುತ್ತಿರುವ 'ಆತ್ಮ ನಿರ್ಭರತೆ'ಯ ಕಾವು ಕುಳಿತಿದೆ!’

About the Author

ಡಿ.ಎಸ್. ವೀರಯ್ಯ

ಲೇಖಕ ಡಿ.ಎಸ್. ವೀರಯ್ಯ ಅವರು ಬೆಂಗಳೂರಿನ ಗಿರಿನಗರದವರು. ಎಂ.ಕಾಂ, ಎಲ್.ಎಲ್.ಬಿ, ಡಿ.ಪಿ.ಎಂ ಹಾಗೂ ಐಆರ್, ಡಿಪ್ಲೊಮಾ ಇನ್ ಜರ್ನಲಿಸಂ ಪದವೀಧರರು. ಪ್ರಸ್ತುತ ಡಿ. ದೇವರಾಜ್ ಟ್ರಕ್ಕ್ ಟರ್ಮಿನಲ್ ಅಧ್ಯಕ್ಷರು. ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ, ರಾಜ್ಯ ಕನ್ನಡ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.  ಕೃತಿಗಳು:  ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು. ಪ್ರಶಸ್ತಿ-ಪುರಸ್ಕಾರಗಳು: ಸಮಾಜ ರತ್ನ, ಕರ್ನಾಟಕ ರತ್ನ, ಬುದ್ಧ ರತ್ನ, ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ, ಸರ್. ಎಂ.ವಿಶ್ವೇಶ್ವರಯ್ಯ ಆವಾರ್ಡ್, ಸಂಘಟನ ಶಿಲ್ಪಿ ಸೇರಿದಂತೆ  ಹಲವಾರು ಪ್ರಶಸ್ತಿ-ಗೌರವಗಳು ಲಭಿಸಿವೆ.  ...

READ MORE

Related Books