‘ಯುದ್ಧೋತ್ತರ ಕಾಂಡ’ ಯಡೂರ ಮಹಾಬಲ ಅವರ ಕೃತಿ. 1962ರ ನಂತರದ ಭಾರತ ಚೀನಾ ಸಂಬಂಧ ಕುರಿತಾದ ಕೃತಿ ಇದು. 8 ಅಧ್ಯಾಯಗಳಲ್ಲಿ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಕದನ ವಿರಾಮ ಮತ್ತು ನಂತರ, ಅನುಚಿತ ಬಂಧನಗಳು, ಸಿಐಎ ಕಾರ್ಯಾಚರಣೆ, ಮಾನಗೆಟ್ಟ ಸರ್ಕಾರ, ಕದನ ವಿರಾಮ ರೇಖೆಯ ವಾಗ್ಯುದ್ಧ, ಕೊಲಂಬೋ ಸಮ್ಮೇಳನ, ಅದರ ಶಿಫಾರಸುಗಳು, ಪ್ರತಿಕ್ರಿಯೆಗಳು, ಇತರೆ ಬೆಳವಣಿಗೆಗಳು ಪ್ರಶಸ್ತಿಗಳು ಮತ್ತು ಬಹುಮಾನಗಳು, ಅಧ್ಯಾಯ 7ರಲ್ಲಿ ನೆಹರು ನಂತರದ ಬೆಳವಣಿಗೆಗಳು, ಹಾಗೂ ಕೊನೆಯ ಅಧ್ಯಾಯದಲ್ಲಿ ಬೇರೆ ಬೇರೆಯವರ ಅಭಿಪ್ರಾಯಗಳು ಎಂಬ ವಿಭಿನ್ನ ವಿಚಾರಗಳನ್ನು ವಿವರಿಸಲಾಗಿದೆ.
ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ. ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...
READ MORE