ಏನಿದು ಲೋಕ್‌ಪಾಲ್ ?

Author : ವೈ.ಜಿ.ಮುರಳೀಧರನ್

Pages 40

₹ 18.00




Year of Publication: 2011
Published by: ನವಕರ್ನಾಟಕ ಪಬ್ಲಿಕೇಶನ್‌
Address: ಕ್ರೆಸೆಂಟ್‌ ರೋಡ್‌, ಕುಮಾರ ಪಾರ್ಕ್, ಬೆಂಗಳೂರು 560001
Phone: 7353530805

Synopsys

ಏನಿದು ಲೋಕ್‌ಪಾಲ್ ? ಎಂಬ ಪುಸ್ತಕವು ವೈ.ಜಿ ಮುರಳೀಧರನ್‌ ಅವರ ಕೃತಿಯಾಗಿದೆ. ಈ ಕೃತಿಯಲ್ಲಿ ಓಮ್‌ಬಡ್ಸ್‌ಮನ್ ಎಂಬುದಾಗಿ ಪ್ರಾರಂಭದಲ್ಲಿ ವಿದೇಶಗಳಲ್ಲಿ ಪರಿಚಿತವಾಗಿ ಈತ ಭಾರತದಲ್ಲಿ ಲೋಕ್‌ಪಾಲ್ , ಜನ್-ಲೋಕ್‌ಪಾಲ್, ಲೋಕಾಯುಕ್ತ ಪದವಿಗಳೆಂದು ಉಲ್ಲೇಖಿತವಾಗಿರುವ, ಎಲ್ಲರಿಗೂ ಆತ್ಮೀಯವಾಗಿ ಕಾಣುವ ಕಾನೂನು ಇದು. ಈ ಲೋಕ್‌ಪಾಲ್ ಎಂದರೇನು ? ಅದರ ಕಾರ್ಯವ್ಯಾಪ್ತಿ ಏನು ? ಇದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಿ ಆಡಳಿತ ಯಂತ್ರ ಸುಧಾರಿಸುತ್ತದೆಯೇ ? ಈ ಮಸೂದೆಯಲ್ಲಿನ ಲೋಪಗಳೇನು ? ಇದನ್ನು ತಿಳಿಯಲು ಎಲ್ಲರಿಗೆ ಹಕ್ಕಿದೆ ಮಾತ್ರವಲ್ಲ ಕುತೂಹಲವೂ ಇದೆಯಲ್ಲವೆ ? ಶ್ರೀಸಾಮಾನ್ಯನಿಗೆ ಅವಶ್ಯವಿರುವ ಇಂತಹ ಮಾಹಿತಿಗಳನ್ನು ಈ ಪುಸ್ತಕದಲ್ಲಿ ಹೊರತರಲಾಗಿದೆ.

About the Author

ವೈ.ಜಿ.ಮುರಳೀಧರನ್
(16 August 1956)

ವೈ.ಜಿ.ಮುರಳೀಧರನ್ ಅವರು [1956] ಬಿ ಕಾಂ ಪದವೀಧರರು ಮತ್ತು ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೋಮ ಪಡೆದಿದ್ದಾರೆ. ಬಿ ಎಚ್ ಇ ಎಲ್ ಕಾರ್ಖಾನೆಯಲ್ಲಿ 20 ವರ್ಷ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ನಂತರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ 12 ವರ್ಷ ಗ್ರಾಹಕ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ. 1993ರಿಂದ ಗ್ರಾಹಕ ಹಕ್ಕುಗಳು, ಮಾಹಿತಿ ಹಕ್ಕು ಇತ್ಯಾದಿ ಸಾಮಾಜಿಕ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಕೇಂದ್ರ ಸರಕಾರದ ವಿವಿಧ ಸಲಹಾ ಮಂಡಳಿಯ ಸದಸ್ಯರಾಗಿ ನಾಗರಿಕರನ್ನು ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದ ಆಡಳಿತ ತರಬೇತಿ ಸಂಸ್ಥೆ, ನ್ಯಾಷನಲ್ ಲಾ ಸ್ಕೂಲ್ ...

READ MORE

Related Books