‘ವಿಚಾರ ದೀಪಿಕೆ’ ಲೇಖಕ ಎಸ್. ಎಸ್. ಆಲಗೂರ ಅವರ ಲೇಖನ ಸಂಕಲನ. 1999ರಲ್ಲಿ ಮೊದಲ ಮುದ್ರಣಕಂಡಿದ್ದ ಈ ಕೃತಿ 2010ರಲ್ಲಿ ಎರಡನೇ ಮುದ್ರಣ ಹಾಗೂ 2021ರಲ್ಲಿ ಮೂರನೇ ಮುದ್ರಣಕಂಡಿದೆ. 22 ಕಿರು ಲೇಖನಗಳು ಸಂಕಲನಗೊಂಡಿವೆ. ಇವು ಸಾಮಾಜಿಕ, ರಾಜಕೀಯ, ಇತಿಹಾಸ, ಸಾಹಿತ್ಯ, ಶಿಕ್ಷಣ, ಸಂಸ್ಕೃತಿ, ಧರ್ಮ, ದೇವರು, ಹೀಗೆ ಬದುಕಿನ ನಾನಾ ಕ್ಷೇತ್ರಗಳಿಗೆ ವ್ಯಾಪಿಸುವ ವಿಷಯಗಳಿಗೆ ಸಂಬಂಧಿಸಿದ ವಿಚಾರ ಪ್ರಚೋದಕ ಲೇಖನಗಳು. ಇಲ್ಲಿ ವಿಚಾರ ಸ್ಪಷ್ಟತೆ, ದಲಿತರು ಹೊಸ ಹೆಜ್ಜೆ ಇಡಬೇಕು, ಹಿಂದುಳಿದ ವರ್ಗಗಳು ಮತ್ತು ಎಡಪಂಥೀಯ ಹೋರಾಟ, ನಮಗೆ ಬೇಕಾದ ಸಾಹಿತ್ಯ, ನಾವು ಕನ್ನಡನಾಡನ್ನು ಕಟ್ಟಿದ್ದೇವೆಯೆ, ಪ್ರಕೃತಿ ಚಿಕಿತ್ಸೆ, ಬುದ್ಧಿಜೀವಿಗಳು ಮತ್ತು ಭಾರತ, ನಮ್ಮ ಯುವಕರು, ಕುತೂಹಲ, ವಿಚಾರ ಸರಣಿ, ದೇವರು, ಧರ್ಮ, ಶಿಕ್ಷಣ, ಸಂಸ್ಕೃತಿ, ಶಕ್ತಿ, ಹೋರಾಟ, ಒಕ್ಕಟ್ಟು, ನಿಸರ್ಗ, ಇತಿಹಾಸ ನಿರ್ಮಾಣ, ಸಂಘಟನೆ, ಸರ್ವ ಸಮಾನತೆಯ ನವ ಸಮಾಜ, ಹಾಗೂ ಸ್ವಾಭಿಮಾನಿ ಎಂಬ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
ಲೇಖಕ ಎಸ್. ಎಸ್. ಆಲಗೂರ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಗೂರ ಗ್ರಾಮದವರು. ಎಂ.ಎ ಪದವೀಧರರು. ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಕರ್ನಾಟಕ ಸ್ನೇಹಗಂಗಾ ವಾಹಿನಿಯ ಮೂಲಕ ಸಮಾಜ ಸೇವೆ. ವಿಚಾರವಾದಿಯ ನೆಲೆಯಲ್ಲಿ ಹಲವು ಕೃತಿಗಳು ಪ್ರಕಟವಾಗಿದ್ದು, ಮುಪ್ಪಿನ ಷಡಕ್ಷರಿ ಹಾಡುಗಳು ಪದವಿ ತರಗತಿಗೆ ಪಠ್ಯವಾಗಿತ್ತು ಆಕಾಶವಾಣಿಯಲ್ಲಿ ‘ವಿಚಾರ ದೀಪಿಕೆ’ ಕಾರ್ಯಕ್ರಮ ನೀಡುತ್ತಿದ್ದಾರೆ. ...
READ MORE