ಕೆ.ವಿ. ಸುಬ್ಬಣ್ಣನವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಮಗ್ರ ಸಂಕಲನ ಇದು. ಪ್ರಸ್ತುತ, ಇದು ಎರಡನೆಯ ಆವೃತ್ತಿಯಾಗಿದ್ದು ಇದರಲ್ಲಿ ಆರು ವಿಭಾಗಗಳಿವೆ. ಸಮಾಜ, ಸಂಸ್ಕ ತಿ, ಸಾಹಿತ್ಯ, ಕಲೆಗಳು, ವ್ಯಕ್ತಿಗಳು ಮತ್ತು ಕೃತಿಗಳು.
ಈ ವಿಚಾರಗಳನ್ನು ಕುರಿತ ಲೇಖನಗುಚ್ಛಗಳು ಇಲ್ಲಿ ಸೇರಿವೆ. ಕನ್ನಡ ರಂಗಭೂಮಿ, ಸಾಹಿತ್ಯ, ಕಲೆಗಳು ಮತ್ತು ಸಮಕಾಲೀನ ವ್ಯಕ್ತಿಗಳು ಮತ್ತು ವಿದ್ಯಮಾನಗಳಿಗೆ ವಿಮರ್ಶಾತ್ಮಕವಾದ ಕ್ರಿಯಾಶೀಲ ಮನಸ್ಸೊಂದು ಪ್ರತಿಸ್ಪಂದಿಸಿದ ಬಗೆಯನ್ನು ಈ ಲೇಖನಗಳು ಪ್ರತಿಫಲಿಸುತ್ತವೆ. ಖ್ಯಾತ ವಿಮರ್ಶಕ ಟಿ.ಪಿ. ಅಶೋಕ ಅವರು ವಿಸ್ತಾರವಾದ ಪ್ರಸ್ತಾವನೆಯೊಂದಿಗೆ ಈ ಸಂಕಲನವನ್ನು ಸಂಪಾದನೆ ಮಾಡಿದ್ದಾರೆ.
ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...
READ MORE