ಅಮೆರಿಕದ ನ್ಯೂ ಇಂಗ್ಲೆಂಡ್ ನಲ್ಲಿರುವ ಕನ್ನಡ ಸಾಹಿತ್ಯ ರಂಗ ಸಂಸ್ಥೆಯು ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರತವಾಗಿದ್ದು, ಲೇಖಕರಾದ ಮೈ.ಶ್ರೀ. ನಟರಾಜ ಹಾಗೂ ಜ್ಯೋತಿ ವೆಂಕಟಸುಬ್ರಹ್ಮಣ್ಯ ಅವರು ಜಂಟಿಯಾಗಿ ಬರಹಗಳನ್ನು ಸಂಪಾದಿಸಿದ ಕೃತಿ-ಅಮೆರಿಕ್ ಜಾನಪದ ಕನ್ನಡ ಕಂಗಳಿಗೆ ಕಂಡಂತೆ. ಅಮೆರಿಕನ್ ಮೂಲ ನಿವಾಸಿಗಳ ಸಾಹಿತ್ಯ, ಬದುಕು, ಸಂಸ್ಕೃತಿಗಳು ಕುರಿತಂತೆ ಅಮೆರಿಕನ್ ವಾಸಿ ಕನ್ನಡಿಗರು ಕಂಡ ಹಾಗೂ ಗ್ರಹಿಕೆಯನ್ನು ಈ ಬರಹಗಳು ಪ್ರತಿನಿಧಿಸುತ್ತವೆ. ಜಗತ್ತಿನ ಎಲ್ಲ ಜಾನಪದೀಯ ಕಲೆ, ಸಂಸ್ಕೃತಿ, ಸಾಹಿತ್ಯವು ಮಾನವೀಯತೆಯನ್ನು, ಸಹಬಾಳ್ವೆಯನ್ನು, ಸಾಮರಸ್ಯವನ್ನು ಹೇಳುತ್ತವೆ.
ಮೈ.ಶ್ರೀ. ನಟರಾಜ-ಹುಟ್ಟೂರು ಹಾಸನ, ಅರವತ್ತರ ದಶಕದ ಕೊನೆಯಲ್ಲಿ ಅಮೆರಿಕೆಗೆ ತೆರಳಿ, ಅಮೆರಿಕದ ಅಣುಶಕ್ತಿ ನಿಯಂತ್ರಣ ಆಯೋಗದಲ್ಲಿ ರಾಕ್ ಮೆಕ್ಯಾನಿಕ್ಸ್ ವಿಭಾಗಾಧಿಕಾರಿ ಮತ್ತಿತರ ಜವಾಬ್ದಾರಿಗಳೊಂದಿಗೆ ಸೇವೆ ಸಲ್ಲಿಸಿ ನಿವೃತ್ತರಾಗಿ ಮೇರೀಲ್ಯಾಂಡಿನಲ್ಲಿ ಪತ್ನಿ ಗೀತಾರೊಂದಿಗೆ ವಾಸವಿದ್ದಾರೆ. ನಾನೂ ಅಮೆರಿಕನ್ ಆಗಿಬಿಟ್ಟೆ, ಮಧುಚಂದ್ರ, ಸಿರಿಕೇಂದ್ರ (ಕವನ ಸಂಕಲನ), ಮೀನಿನ ಹೆಜ್ಜೆ, ಮತ್ತು ನೇಣು, ಪರದೇಶಿಗಳ ಪಾರ್ಟಿ ಮತ್ತು ಇತರ ಮೂರು ನಾಟಕಗಳು. ಮತ್ತು ಐ ಆ್ಯಮ್ ಬ್ರಾಹ್ಮಣ್ (ನಾಟಕಗಳು), ಜಾಲತರಂಗ, ಮತ್ತು ಜಾಲತರಂಗಿಣಿ (ಅಂಕಣ ಬರಹಗಳು) , ಮಾಯಾವಿ ಸರೋವರ (ಅನುವಾದಿತ ನಾಟಕ) The void and the womb (ಬಯಲು-ಬಸಿರು) ...
READ MORE