ʼಕರನಿರಾಕರಣೆಯ ವೀರಕಥೆʼ ಲೇಖಕ ರಂಗನಾಥ ದಿವಾಕರ ಅವರ ಲೇಖನಗಳ ಸಂಕಲನ. ಅಂಕೋಲ, ಶಿರಸಿ, ಸಿದ್ದಾಪುರ, ಹಿರೇಕೂರೂರು ವ್ಯಾಪ್ತಿಯಲ್ಲಿ ನಡೆದ ಕರಾನಿರಾಕರಣೆ ಆಂದೋಲನದ ಸಂಕ್ಷಿಪ್ತ ವರ್ಣನೆಯನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ಕೃತಿಯ ಪರಿವಿಡಿಯಲ್ಲಿ ರಣಕ್ಷೇತ್ರ, ಸಮರಸಿದ್ಧತೆ, ಕಾಯದೆ ಭಂಗದ ಪ್ರಾರಂಭ, ಕಾಯದೆ ಭಂಗದ ಮುನ್ನಡೆ, ಕರಾನಿರಾಕರಣೆಯ ಸಂಘಟನೆ, ಕರಾನಿರಾಕರಣೆಯ ಘೋಷಣೆ, ಆರ್ಥಿಕ ಕಾರಣದಿಂದ ಕರಾನಿರಾಕರಣೆ, ಗಾಂಧಿ, ಯುದ್ಧವಿರಾಮದ ಮುಕ್ತಾಯ, ರಣಕಹಳೆ ಮೊಳಗಿತು, ದಬ್ಬಾಳಿಕೆ, ಸತ್ವಪರೀಕ್ಷೆ, ಅಹಿಂಸೆಯ ಅಗ್ನಿಪರೀಕ್ಷೆ, ಆಘಾತ-ಪ್ರತ್ಯಾಘಾತ, ಅಪಪ್ರಚಾರದ ಸ್ವರೂಪ ದರ್ಶನ, ಮುಕ್ತಾಯದ ಮುನ್ನ, ಹೊಸ ಬಾಳಿನ ದಾರಿಯಲ್ಲಿ, ಉಪಸಂಹಾರ ಹೀಗೆ ಒಟ್ಟು 18 ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.
ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು. 1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ...
READ MORE