ಬಹುರೂಪ

Author : ಪುರುಷೋತ್ತಮ ಬಿಳಿಮಲೆ

₹ 200.00




Year of Publication: 2013
Published by: ಯಜಿ ಪ್ರಕಾಶನ
Address: ಭೂಮಿ, ಎಂ.ಪಿ. ಪ್ರಕಾಶ ನಗರ, ನಹಾರ್‌ ಕಾಲೋನಿ, ಹೊಸಪೇಟೆ, ಬೆಂಗಳೂರು- 560037
Phone: 09449922800

Synopsys

ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಅವರ ಅಂಕಣ ಬರಹಗಳ ಸಂಕಲನ ಕೃತಿ ʼಬಹುರೂಪʼ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಡಾ.ವಿವೇಕ ರೈ ಅವರು, “ಡಾ. ಪುರುಷೋತ್ತಮ ಬಿಳಿಮಲೆ ತುಂಬಾ ಸಂಕೀರ್ಣವಾದ ಸಂಗತಿಗಳನ್ನು ತಮ್ಮ ಅಂಕಣ ಬರಹಗಳಲ್ಲಿ ಬಿಡಿಬಿಡಿಯಾಗಿ ಚರ್ಚಿಸುತ್ತಾರೆ. ನಿಜವಾದ ಅರ್ಥ್ಲದಲ್ಲಿ ಇಡೀ ಪುಸ್ತಕದ ಎಲ್ಲ ಬರಹಗಳು ಕೆಲವು ಮುಖ್ಯ ತಾತ್ವಿಕತೆಗಳ ಅಭಿವ್ಯಕ್ತಿಯ ಭಿನ್ನ ರೂಪಗಳು. ಅವನ್ನೆಲ್ಲ ಒಂದುಗೂಡಿಸಿದಾಗ ರಾಷ್ಟ್ರೀಯತೆ ಪ್ರಾದೇಶಿಕತೆ ಮತ್ತು ಸ್ಥಳೀಯತೆಗಳ ಸಂಬಂಧ, ಧರ್ಮ ಮಠ ಜಾತಿ ಮತ್ತು ಭಾಷೆಗಳ ಸಂಬಂಧ, ಸಾಹಿತ್ಯ ಜಾನಪದ ಮತ್ತು ಕಲೆಗಳ ಸಂಬಂಧ – ಹೀಗೆ ಅನೇಕ ಪರಿಣಾಮಗಳ ಮೂಲಕ ಪುನಾರಚನೆ ಮಾಡಬಹುದು. ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ, ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು, ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡುವುದು; ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು; ಜಾತೀಯತೆ ಮತ್ತು ಕೋಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ದಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು: ಪರಂಪರೆಯ ಸಂಸ್ಕೃತಿಯನ್ನು ಗಲೀಜು ಮಾಡುವ ಆಧುನಿಕತೆಯ ಹುನ್ನಾರುಗಳನ್ನು ಬಯಲು ಮಾಡುವುದು- ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬಾ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು. ಇದು ʻಬಿಳಿಮಲೆ ಬಹುರೂಪʼದ ಆಂಜನೇಯ ಶಕ್ತಿ” ಎಂದು ಹೇಳೀದ್ದಾರೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Related Books