ಅಭಿಲಾಷ್ ಗೌಡ ಅವರ ‘ಬಿಫೋರ್ ಯು ಫಾಲ್!’ ಕೃತಿಯು ಲೇಖನಸಂಕಲನವಾಗಿದೆ. ಈ ಕೃತಿಯ ಕೆಲವೊಂದು ವಿಚಾರಗಳು ಹೀಗಿವೆ: ಬದುಕಿನಲ್ಲಿ ಭಾವನೆಗಳಿಗಿಂತ ವಾಸ್ತವದ ನೆಲೆಗಟ್ಟು ಎಷ್ಟು ಮುಖ್ಯ ಎಂಬುದರ ಕುರಿತು ಮಾತನಾಡಿದೆ ಈ ಕೃತಿ. ಹಣಕಾಸಿನ ಯೋಜನೆ ಬಾಲ್ಯದಿಂದ ಬದುಕಿನುದ್ದಕ್ಕೂ ಹೇಗಿರಬೇಕು ಎಂಬುದನ್ನು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಸ್ಟಾರ್ಟ್ ಅಪ್ ಪ್ರಯತ್ನಗಳೇಕೆ ವಿಫಲವಾಗುತ್ತವೆ ಎಂಬುದನ್ನೂ ವಿಶ್ಲೇಷಿಸಲಾಗಿದೆ. ವರ್ಣರಂಜಿತ ಯಶೋಗಾಥೆಗಳ ಹಿಂದಿನ ಸತ್ಯ–ಮಿಥ್ಯೆಗಳ ಬಗ್ಗೆಯೂ ಕೃತಿ ಮಾತನಾಡಿದೆ. ಮಗಳ ಮದುವೆಗೂ ಮುನ್ನ ಅಳಿಯನ ಸಾವಿನ ಬಗ್ಗೆ ಚಿಂತನೆ, ಮ್ಯೂಚುವಲ್ ಫಂಡ್‌ಗಳ ಪರಿಚಯ, ಸರ್ಕಾರಿ ಯೋಜನೆಗಳ ಮಾಹಿತಿ, ಪೊಲೀಸ್, ಕಾನೂನು ಪ್ರಕ್ರಿಯೆಗಳ ಸಂಕ್ಷಿಪ್ತ ವಿವರಗಳು ಆಸಕ್ತಿದಾಯಕವಾಗಿವೆ.
ಪುಸ್ತಕ ವಿಮರ್ಶೆ: ಎಡವುವ ಮುನ್ನ ಎಚ್ಚರ!(ಪ್ರಜಾವಾಣಿ ವಿಮರ್ಶೆ- 05-03-2023)