ಹಸಿರು ಹೆಜ್ಜೆ

Author : ಮಾಧವ ಐತಾಳ್

Pages 148

₹ 100.00




Year of Publication: 2011
Published by: ಋತ ಪುಸ್ತಕ ಪ್ರಕಾಶನ
Address: # 891, 3-A ಮುಖ್ಯರಸ್ತೆ, ಡಿ-ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010
Phone: 9448076207

Synopsys

‘ಹಸಿರು ಹೆಜ್ಜೆ’ ಕೃತಿಯು ಮಾಧವ ಐತಾಳ್ ಅವರ ಲೇಖನಸಂಕಲನವಾಗಿದೆ. ಪರಿಸರ ಸಂರಕ್ಷಣೆಯ ಮಾತು ಇಂದು ಎಲ್ಲೆಡೆ ಬಲವಾಗಿ ಕಂಡುಬರುತ್ತಿದೆ. ನಾವಿಂದು ನಮ್ಮ ಜೀವನಾಧಾರಗಳಾದ ನೆಲ-ಜಲ-ಗಾಳಿಗಳನ್ನೆಲ್ಲ ಕಲುಷಿತಗೊಳಿಸಿ ಅಭಿವೃದ್ಧಿಯ ನೆಪದಲ್ಲಿ ಹಲವಾರು ಸಮಸ್ಯೆಗಳನ್ನು, ನೈಸರ್ಗಿಕ ಆಪತ್ತು ಗಳನ್ನು ಆಹ್ವಾನಿಸಿದ್ದೇವೆ. ಇದನ್ನು ಬುದ್ಧಿಪೂರ್ವಕ ಮಾಡಿದ್ದಲ್ಲವಾದರೂ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ದೋಚಿ ನಗರಗಳನ್ನು ಕಟ್ಟಿ ಮೆರೆಯುತ್ತಿರುವ ಮನುಷ್ಯ ಇಂದು ಹಾಳುಗೆಡವಿದ ಪರಿಸರದಲ್ಲೇ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿವುದನ್ನು ಕಾಣಬಹುದು ಎನ್ನುತ್ತದೆ ಈ ಕೃತಿ.

About the Author

ಮಾಧವ ಐತಾಳ್

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕ. ಹದಿನೈದಕ್ಕೂ ಕೃತಿಗಳನ್ನು ರಚಿಸಿದ್ದಾರೆ. ‘ಋತ’ ಎಂಬ ದ್ವೈಮಾಸಿಕ ಕೂಡ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದು, ಈಗಾಗಲೇ ಹಲವಾರು ವಿಚಾರಗಳ ಕುರಿತು ಸಂಚಿಕೆಗಳು ಬಂದಿವೆ. ಅಕ್ಷರ ಪ್ರಕಾಶನದಿಂದ ಪ್ರಕಟವಾಗಿರುವ ಜಾಗತಿಕ ಪರಿಸರ ಚರಿತ್ರೆ, ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಬತ್ತದ ಚಿಲುಮೆ, ಪಶ್ಚಿಮ ಘಟ್ಟಗಳ ಕಥೆ ಹೇಳುವ ವೈವಿಧ್ಯದ ತೊಟ್ಟಿಲು ಸೇರಿದಂತೆ 16 ಕೃತಿಗಳನ್ನು ಮಾಧವ ಐತಾಳ್ ಬರೆದಿದ್ದಾರೆ. ...

READ MORE

Reviews

(ಹೊಸತು, ಆಗಸ್ಟ್ 2012, ಪುಸ್ತಕದ ರಾಶಿ)

'ವಿನಾಶಕಾಲೇ ವಿಪರೀತ ಬುದ್ಧಿ' - ಇಂಥ ಕಿವಿ ಮಾತನ್ನು ಕಿವಿಗೇ ಹಾಕಿಕೊಳ್ಳದೆ ಮುನುಷ್ಯ ತನ್ನ ವಿಪರೀತ ಸೌಕರ್ಯ ಗಳಿಗಾಗಿ ತನ್ನ ಸುತ್ತಲ ಪರಿಸರವನ್ನು ಹಾಳುಗೆಡವಿದ್ದಾನೆ. ತನಗಿಂತ ಮೊದಲೂ ಈ ಭೂಮಿಯಿತ್ತು, ಹನೂ ಅದಕ್ಕೆ ಸೇರಬೇಕಾದವನೆಂಬ ಸತ್ಯ, ವಿವೇಕ ನಮ್ಮ ಪೂರ್ವಿಕರಿಗೆ ಇತ್ತು. ಮನುಷ್ಯ ಎಷ್ಟೇ ಬುದ್ದಿವಂತನಾದರೂ ವಿವೇಕ ಕಳೆದುಕೊಂಡಾಗ ಅಪಾಯ ಕಾದಿರುತ್ತದೆ. ಪರಿಸರ ಸಂರಕ್ಷಣೆಯ ಮಾತು ಇಂದು ಎಲ್ಲೆಡೆ ಬಲವಾಗಿ ಕಂಡುಬರುತ್ತಿದೆ. ನಾವಿಂದು ನಮ್ಮ ಜೀವನಾಧಾರಗಳಾದ ನೆಲ-ಜಲ-ಗಾಳಿಗಳನ್ನೆಲ್ಲ ಕಲುಷಿತಗೊಳಿಸಿ ಅಭಿವೃದ್ಧಿಯ ನೆಪದಲ್ಲಿ ಹಲವಾರು ಸಮಸ್ಯೆಗಳನ್ನು, ನೈಸರ್ಗಿಕ ಆಪತ್ತು ಗಳನ್ನು ಆಹ್ವಾನಿಸಿದ್ದೇವೆ. ಇದನ್ನು ಬುದ್ಧಿಪೂರ್ವಕ ಮಾಡಿದ್ದಲ್ಲ ವಾದರೂ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ದೋಚಿ ನಗರಗಳನ್ನು ಕಟ್ಟಿ ಮೆರೆಯುತ್ತಿರುವ ಮನುಷ್ಯ ಇಂದು ಹಾಳುಗೆಡವಿದ ಪರಿಸರದಲ್ಲೇ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾನೆ. ಇದನ್ನೆಲ್ಲ ತಡವಾಗಿಯಾದರೂ ಅರಿತುಕೊಂಡು ಪರಿಸರ ಸಂರಕ್ಷಣೆಯ ಅಗತ್ಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಶೃಂಗಸಭೆ - ಸಮಾವೇಶಗಳು ನಡೆದಿವೆ. ಎಚ್ಚರಿಕೆಯ ಗಂಟೆ ಬಾರಿಸಲಾಗಿದೆ, ಕಳಕಳಿಯ ಮನವಿ ಮಾಡಲಾಗಿದೆ. ಶ್ರೀಮಂತಿಕೆಯ ಸುಖದ ಸವಿಕಂಡ ದೇಶಗಳು ಸ್ಪಂದಿಸುತ್ತಿಲ್ಲ. ಪ್ರಪಂಚದ ಎಲ್ಲರಿಗೂ ಸಂಬಂಧಿಸಿದ ಈ ಸಮಸ್ಯೆ ಬಗ್ಗೆ ಇಲ್ಲಿನ ಲೇಖನಗಳಲ್ಲಿನ ಮಾಹಿತಿ ತುಂಬ ಮುಖ್ಯ. ಮನುಷ್ಯ ಮಾಡಿದ ಹಾವಳಿ ಎಷ್ಟೊಂದು ಇಲ್ಲಿ ಓದಿ ನೋಡಿ?

Related Books