‘ಸುಸಂಸ್ಕೃತ ಸೇತುವೆ ದಿವ್ಯಭವ್ಯ ಕುಂಕುಮ’ ಕೆ ಗಣಪತಿ ಭಟ್ಟ ಅವರ ಕುಂಕುಮ ಕುರಿತ ಮಾಹಿತಿಯ ಕೃತಿಯಾಗಿದೆ. ಈ ಪುಸ್ತಕದಲ್ಲಿ ಸಾಧಕರಿಗೆ ಉತ್ತೇಜನ ನೀಡುವ ಎರಡು ವಿಷಯಗಳು ಅಡಕವಾಗಿವೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಂಘಟನಾತ್ಮಕ ಎಂಬ ಪಂಚಮುಖಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪರೂಪದ ವ್ಯಕ್ತಿತ್ವ ಡಾ ಗಣಪತಿ ಭಟ್ಟರದ್ದು. ಇವರ ಪ್ರಬಲವಾದ ಇಚ್ಛಾಶಕ್ತಿ ಹಾಗೂ ಸಂಸ್ಕೃತಭಾರತಿಯ ಪ್ರಭಾವದಿಂದ ಇದನ್ನು ಮಂಜೂರು ಮಾಡಿಸಿದ್ದರಿಂದ ಇದು 'ಸಂಸ್ಕೃತ ಸೇತುವೆ' ಆಗಿದೆ ಮತ್ತು ಕಳಪೆ ಕಾಮಗಾರಿಯಾಗದಿರುವುದರಿಂದ ಇದು ಸುಸಂಸ್ಕೃತ ಸೇತುವೆಯೂ ಹೌದು, ಅನಿವಾರ್ಯವಾಗಿ ಸೇತುವೆ ಕೆಲಸದಲ್ಲಿ ತೊಡಗಿದ್ದರಿಂದ ಪುಸ್ತಕ ರಚನೆಯೆಂಬ ಕೈಂಕರ್ಯದಲ್ಲಿ ಹಿನ್ನೆಡೆಯಾಯಿತೆಂದು ಇವರೇ ಹೇಳುತ್ತಾರೆ. ಅನೇಕ ಬಾಧಕಗಳ ನಡುವೆಯೂ ರಸ್ತೆ ಮತ್ತು ಸೇತುವೆಯನ್ನು ನಿರ್ಮಿಸಿದ್ದಾರೆ. ಗುತ್ತಿಗೆದಾರ ಗಣೇಶ ನಾಯ್ಕ ಮತ್ತು ಗಣಪತಿ ಭಟ್ಟರ ಋಣ ಊರಿನವರ ಮೇಲಿದೆ ಎಂದರೂ ತಪ್ಪಾಗಲಾರದು. ಇನ್ನು, ಶುದ್ಧ ಕುಂಕುಮದ ಮಾಹಿತಿ ಮತ್ತು ತಯಾರಿಕೆಯ ಕುರಿತು ವಿಶ್ವತವಾಗಿ, ಸೋದಾಹರಣವಾಗಿ ಇಲ್ಲಿ ತಿಳಿಸಲಾಗಿದೆ. ಇದೊಂದು ವಿಜ್ಞಾನ ಮತ್ತು ತತ್ತ್ವಗಳ ಹಿನ್ನೆಲೆಯ ಆಂದೋಲನದ ವಿಷಯ. ಇವರ ಅಭಿಯಾನದ ಪರಿಣಾಮವಾಗಿ ಸಾವಿರಾರು ಮಹಿಳೆಯರು ಪ್ರತಿವರ್ಷ ಮನೆಯಲ್ಲೇ ಶುದ್ಧಕುಂಕುಮ ತಯಾರಿಸುತ್ತಿದ್ದಾರೆ. ಸುಕನ್ಯಾ ಗುನಗಾ, ಸ್ನೇಹಾ ಮರಾಠಿ ಮುಂತಾದ ಹತ್ತಾರು ಪ್ರಾತ್ಯಕ್ಷಿಕೆದಾರರನ್ನು ಸಿದ್ಧಪಡಿಸಿದ್ದಾರೆ.
ವಿದ್ವತ್ತು, ಸಂಗೀತ, ಯೋಗ, ಅಧ್ಯಾಪನ, ಆಚರಣೆ, ಉಪನ್ಯಾಸ, ಬರವಣಿಗೆ, ಸಂಘಟನೆ, ಸಮಾಜಸೇವೆ, ಅಧ್ಯಾತ್ಮ ಮುಂತಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವವರು ಡಾ. ಗಣಪತಿ ಭಟ್ಟ. 1960ರಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಂತೂರು ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಧಾರವಾಡದಲ್ಲಿ ನ್ಯಾಯಶಾಸ್ತ್ರ, ವ್ಯಾಕರಣ ಮತ್ತು ಸಂಗೀತ ಅಭ್ಯಾಸ ಪೂರೈಸುತ್ತಿರುವಾಗಲೇ 1987 ರಲ್ಲಿ ಅನಾಯಾಸವಾಗಿ ದೊರೆತ ಶಿಕ್ಷಕವೃತ್ತಿಯೊಂದಿಗೆ ನೂರಾರು ವಟುಗಳಿಗೆ ಚತುರ್ವೇದ ಮಂತ್ರಗಳನ್ನು, ಮಹಿಳೆಯರಿಗೆ ರಾಗಸಹಿತವಾಗಿ ಸ್ತೋತ್ರಗಳನ್ನು, ವಿದ್ಯಾರ್ಥಿಗಳಿಗೆ ಸುಭಾಷಿತ-ಭಗವದ್ಗೀತೆಗಳನ್ನು ವರ್ಗ-ಶಿಬಿರಗಳ ಮೂಲಕ ಸುಸ್ವರವಾಗಿ ಬೋಧಿಸಿದ್ದಾರೆ. ವೇದಿಕೆಗಳನ್ನೂ ಕಲ್ಪಿಸಿದ್ದಾರೆ. ವಿವಿಧ ಸಂಸ್ಥೆಗಳ ಮೂಲಕ 50ಕ್ಕೂ ಹೆಚ್ಚು ಪುಸ್ತಕ-ಧ್ವನಿಮುದ್ರಿಕೆಗಳನ್ನು ಪ್ರಕಟಿಸಿದ್ದಲ್ಲದೇ ಹತ್ತು ವರ್ಷಗಳಲ್ಲಿ ಸಹಸ್ರಾಧಿಕ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ...
READ MORE