ಕನ್ನಡ ನವೋದಯ ಸಾಹಿತ್ಯದಲ್ಲಿ ಪ್ರಮುಖರಾದ ಡಾ. ಬೆಟಗೇರಿ ಕೃಷ್ಣಶರ್ಮ ಅವರು ಕಾವ್ಯ, ಸಣ್ಣಕತೆ, ಕಾದಂಬರಿ, ಸಂಸ್ಕೃತಿ ಸಂಶೋಧನೆ, ಜಾನಪದ ಮತ್ತು ಪತ್ರಿಕಾ ವ್ಯವಸಾಯ ಹೀಗೆ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ಯ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಇವರು, ಕರ್ನಾಟಕ ಸಂಸ್ಕೃತಿಗೆ ಸಂಬಂಧಪಟ್ಟಂತೆ ರಚಿಸಿದ ಲೇಖನಗಳ ಸಂಗ್ರಹ ಈ ಕೃತಿ.
ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...
READ MORE