ಚಿಂತನ-ಸಿಂಚನ

Author : ಗುರುಲಿಂಗಪ್ಪ ಧಬಾಲೆ

Pages 118

₹ 120.00




Year of Publication: 2020
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಲೇಖಕ ಡಾ. ಗುರುಲಿಂಗಪ್ಪ ಧಬಾಲೆ ಅವರು ಗುಲಬರ್ಗಾ ಆಕಾಶವಾಣಿಯಲ್ಲಿ ಪ್ರಸಾರವಾದ ತಮ್ಮ ಚಿಂತನೆಗಳನ್ನು ಸಂಗ್ರಹಿಸಿದ ಕೃತಿ-ಚಿಂತನ-ಸಿಂಚನ. ಒಟ್ಟು 25 ಚಿಂತನಗಳಿವೆ, ಮಾನವನ ಜೀವನ ಪಥವನ್ನು ಬೆಳಗಲು ಇರುವ ಅನುಭವದ ಹಣತೆಗಳಂತೆ ಈ ಚಿಂತನೆಗಳಿವೆ. ಸಮಾಜಕ್ಕೆ ಮಾನವೀಯತೆಯ ಪಾಠ ಮಾಡುವುದು ಒಂದು ಸವಾಲು. ಧಬಾಲೆಯವರು ಹೇಳುವಂತೆ 'ಹಿಮಾಲಯವನ್ನು ಉಜ್ಜುಗೊರಡಿನಂತೆ ಉಜ್ಜಿ ಸವೆ ಸಬಹುದು, ಸಪ್ತ ಸಾಗರಗಳನ್ನು ಬಿಂದಿಗೆಯಿಂದ ಬರಿದು ಮಾಡಬಹುದು.ಸಮಾಜವನ್ನು ತಿದ್ದುವುದು ಮಾತ್ರ ಸಾಧ್ಯವಾಗದು' ಎನ್ನತ್ತಲೇ, ಸಾಮಾಜಿಕ ಅರಿವು ಮೂಡಿಸುವುದು ಸಮಾಜದ ಪ್ರತಿ ವ್ಯಕ್ತಿಯ ಹೊಣೆಗಾರಿಕೆ ಎನ್ನುತ್ತಾರೆ. ಚಿಂತನೆಗಳ ವೈಶಿಷ್ಟ್ಯವೂ ಆದೇ ಆಗಿದೆ. ನಿರೂಪಣೆ, ಸಹಜವಾಗಿ ಸರಳವಾಗಿದೆ.

ಮೊದಲಿನ ಆರು ಚಿಂತನೆಗಳಲ್ಲಿಯ 6 ಜನ ಮಹಾನುಭಾವರ ವ್ಯಕ್ತಿತ್ವದ ಸಾಂಸ್ಕೃತಿಕ ಅನನ್ಯತೆಗಳು ಸಿಂಚನದ ಶಕ್ತಿಯನ್ನು ಇಮ್ಮಡಿಗೊಳಿಸಿವೆ. ನಿರಾಡಂಬರದ ಸಹಜ ಬದುಕಿನ ಅವಿಸ್ಮರಣೀಯ ಉದಾಹರಣೆ ಬಸವಣ್ಣ. 'ಆನೆ ಕುದುರೆಗಳನ್ನೆರಿ ಕುಂಕುಮ-ಕಸ್ತೂರಿ ಲೇಪಿಸಿಕೊಂಡು ಮೆರೆದವರು ಸತ್ಯದ ನಿಲುವು ಅರಿಯಲಿಲ್ಲ. ವೈಭೋಗದ ಮತ್ತಿನಲ್ಲಿ ಬದುಕಿನ ನೈಜ ಉದ್ದೇಶವನ್ನೇ ಮರೆತು ವಿಧಿವಶರಾದರು. ಸದ್ಗುಣಗಳನ್ನು ಬಿತ್ತಲಿಲ್ಲ: ಬೆಳೆಸಲಿಲ್ಲ ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯುವುದೇ ಮಾನವ ಜೀವನದ ಮಹೋನ್ನತಿ' ಬಸವಣ್ಣನವರ ಆ ವಚನ ವಿಶ್ಲೇಷಣೆಯಲ್ಲಿ ಅಭಿವ್ಯಕ್ತಗೊಂಡ ಡಾ. ಧಬಾಲೆಯವರ ಅವರ ವಿಮರ್ಶನ ಪ್ರಜ್ಞೆ ಸಹೃದಯರನ್ನು ಚಕಿತಗೊಳಿಸುತ್ತದೆ.

ಜೊತೆಗೆ, ನಿಸರ್ಗ,ಧರ್ಮ,ಆಧ್ಯಾತ್ಮ, ಸಮಾಜ, ಭಾಷೆ, ಶಿಕ್ಷಣ,ಮಕ್ಕಳ,ಹಬ್ಬ, ಗ್ರಂಥಗಳ ಜೊತೆಗೆ,ಪ್ರೀತಿ, ಮೋಹ, ಮತ್ಸರ, ಪರೋಪಕಾರದಂತಹ ಮಾನವನ ಗುಣ ವಿನ್ಯಾಸ ಮೊದಲಾದ ವಸ್ತು-ವಿಷಯಗಳಲ್ಲಿ ಈ ಚಿಂತನೆಗಳು ಹರವು ಪಡೆದುಕೊಂಡಿವೆ. ವ್ಯಕ್ತಿತ್ವ ವಿಕಾಸದ ಹಂಬಲ.ಅವರ ಮೇಲೆ ಶರಣ,ಸಂತ,ತತ್ವಪದಕಾರರ ಪ್ರಭಾವವಿರುವುದರಿಂದ ಪ್ರತಿಯೊಂದು ಚಿಂತನವು ಸಾಮಾಜಿಕ ನೆಲೆಯಲ್ಲಿ ಸೆಲೆಯೊಡೆದು ಅನುಭಾವಿಕ ನಿಲುವಿನಲ್ಲಿ ವಿಸ್ತರಿಸಿಕೊಳ್ಳುತ್ತವೆ.

About the Author

ಗುರುಲಿಂಗಪ್ಪ ಧಬಾಲೆ
(02 April 1967)

ಲೇಖಕ ಡಾ. ಗುರುಲಿಂಗಪ್ಪ ಶಂಕರಪ್ಪ ಧಬಾಲೆ ಅವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ (ಜನನ: 02-04-1967) ತೊಗಲೂರು ಗ್ರಾಮದವರು. ಸದ್ಯ, ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯ ಸಿ.ಬಿ. ಖೇಡಗಿ ಬಸವೇಶ್ವರ ವಿಜ್ಞಾನ, ಆರ್.ವಿ. ವಾಣಿಜ್ಯ ಹಾಗೂ ಆರ್.ಜೆ. ಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಅಂಬಿಗರ ಚೌಡಯ್ಯನ ವಚನಗಳು: ಒಂದು ಅಧ್ಯಯನ (1991) -ವಿಷಯವಾಗಿ ಪ್ರಬಂಧ ಮಂಡಿಸಿ ಎಂ.ಫಿಲ್ ಪದವಿ, ಹಾಗೂ ಬೀದರ ಜಿಲ್ಲೆಯ ಅನುಭಾವಿ ಕವಿಗಳು ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಕೃತಿಗಳು: ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಬೀದರ ಜಿಲ್ಲೆಯ ತತ್ವಪದಕಾರರು, ...

READ MORE

Related Books