ಕನ್ನಡಿಗರ ಮನದಲ್ಲಿ ಕನ್ನಡದ ಪೂಜಾರಿ ಎಂದೇ ಪರಿಚಿತರಾದ ಹಿರೇಮಗಳೂರು ಕಣ್ಣನ್ ಅವರ ಚಿಂತನ ಬರಹಗಳ ಸಂಗ್ರಹ ’ಕಣ್ಣನ್ ನೋಟ’.
ಬುದ್ದೀ! ಮಾಲಾಶ್ರೀಂತ ಇಟ್ಟ್ರೆ ಯೆಂಗಿರತೈತೆ?, ಮಾಸ್ತರ ಮುಖವೇ ಇಂಗು ತಿಂದ ಮಂಗನಂತಾಯ್ತು, ಜಟಕಾಸಾಬಿ ಬ್ರಾಹ್ಮಣಾರ್ಥ ; ಅಯ್ಯಂಗಾರಿ ಸೇವಾರ್ಥ, ’ಹೆನ್ನಾ’ ಮಾತಿಗೆ ’ಚಾಪ್ಲಿನ್’ ನಗುವಿನ ಮೆರಗು, ಬಾಂಧವ್ಯ ಬದುಕಿಗೆ ಬೆಸೆದವಗೆ ಜೈ!, ಸಂತರಂತೆ ಮನಸ್ಸಿದ್ದರೆ ಸಂಘ ಸಂಸ್ಥೆಗಳೇ ಬೇಕಿಲ್ಲ !, ಬದುಕು ಕ್ರಿಕೆಟ್ಟು – ಬೀಳುವ ವಿಕೆಟ್ಟಿಗೆಂದೇ ಪಡೆದಿದ್ದೇವೆ ಟಿಕೆಟ್ಟು !, ಶ್ರೀಮಂತರ ಮನಸ್ಸು ಶ್ರೀಮಂತವಾಗಬೇಕು, ಸ್ವಂತಕ್ಕಾಗಿ ಸಚಿವರಾಗಿಲ್ಲ; ಸಮಾಜಕ್ಕೆ ಸ್ವಾಮಿ, ಅರೇ ಇಸ್ಕಿ…ಯಾರೀ ಸಹೋತಸ್ಕಿ, ಅತ್ತ ದರ್ಗಾ, ಇತ್ತ ದುರ್ಗಾ, ಇಲ್ಲಿದೆ ಸ್ವರ್ಗ, ಹುಟ್ಟಿದೂರಿನ ಋಣ ಇರಿಸಿಕೊಂಡವ ಜಾಣ!, ಉಪ್ಪಿಟ್ಟವರನ್ನು ಮರೆಯಬಾರದು, ಗ್ರಾಮ ಜೀವನವೇ ಅಪ್ಯಾಯಮಾನ, ದುಡಿದರಲ್ಲವೆ ಬದುಕು, ನಿತ್ಯ ದುಡಿದುಣ್ಣಬೇಕು, ಮನುಕುಲ ಲಕ್ಷಣಕ್ಕೆ ಶಾಸ್ತ್ರಿಗಳ ಧಾರ್ಮಿಕ ಶಿಕ್ಷಣ ಸಾಕ್ಷಿ, ಸಜ್ಜನರ ಸಜ್ಜನಿಕೆಯಲ್ಲಿ ಎಲ್ಲರೂ ಸಮ, ಸಾಯುವುದು ನಮ್ಮಿಚ್ಛೆಯಲ್ಲ, ಗ್ರಂಥಾಲಯ ಭೇಟಿ ತಪ್ಪಿಸಬೇಡಿ, ನಂಬಿಕೆಗೆ ನಾಲ್ಕು ಕಾಲಿನ ಪ್ರಾಣಿಯೇ ವಾಸಿ, ಎಲ್ಲ ಮತದವಳೆಂದು ಬಾಳಿದಳು ಇವಳು, ಹೀಗೆ ಅನೇಕ ಚಿಂತನಾ ಬರಹಗಳನ್ನು ಓದುಗರಿಗೆ ಈ ಕೃತಿಯ ಮೂಲಕ ನೀಡಿದ್ದಾರೆ.
’ಕನ್ನಡ ಪೂಜಾರಿ’ ಚಿರಪರಿಚಿತ ಇರುವವರು ಹಿರೇಮಗಳೂರು ಕಣ್ಣನ್. ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕೋದಂಡರಾಮ ದೇವಾಲಯದ ಅರ್ಚಕರಾಗಿರುವ ಕಣ್ಣನ್ ಅವರು ಕನ್ನಡದಲ್ಲಿ ಅರ್ಚನೆ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಹರಟೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮತ್ತು ನಡೆಸಿಕೊಡುವ ಕಣ್ಣನ್ ಅವರು ಕನ್ನಡದಲ್ಲಿ ಕಣ್ಣನ್ ನೋಟ ಹಾಗೂ ನುಡಿಪೂಜೆ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE