ಕಾಯಕ ಕೈಲಾಸ

Author : ಸುನಂದಾ ಬೆಳಗಾಂವಕರ

Pages 520

₹ 450.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಕಾಯಕ ಕೈಲಾಸ’ ಸುನಂದಾ ಬೆಳಗಾಂವಕರ ಅವರ ಕೃತಿಯಾಗಿದೆ. ಪ್ರಾದೇಶಿಕ ಸಂವೇದನೆಯ ನೆಲೆಯಲ್ಲೇ ವಿಶಾಲ ಪ್ರಪಂಚವನ್ನು ತಮ್ಮ ಕೃತಿಗಳಲ್ಲಿ ತಂದವರು ಇವರು. ಕಾಯಕದ ಮುಖ್ಯ ತತ್ವ ಪ್ರತಿಯೊಬ್ಬ ಮನುಷ್ಯನು ತಾನು ದುಡಿದದ್ದಕ್ಕೆ ತಕ್ಕ ಪ್ರತಿಫಲ ಪ್ರಾಮಾಣಿಕವಾಗಿ ಪಡೆಯಬೇಕು. ಆದರೆ ದುಡಿಯದೆ ದುಡ್ಡು ಗಳಿಸಬೇಕೆಂಬ ವ್ಯವಸ್ಥೆಯಲ್ಲಿ ಈಗಿನ ಕಾಲದವರು ಇರುವಾಗ- ಬಸವಣ್ಣನವರ ಕಾಯಕ ತತ್ವದ ಶಿವಭಕ್ತಿ, ದೃಷ್ಟಾಂತ, ಸಾಕ್ಷಾತ್ಕಾರಗಳ ಮಹಿಮೆ, ಈ ತರಹದ ಚಿಂತನೆಗಳ ಕಾದಂಬರಿ ಜನ ಮೆಚ್ಚಬಹುದೇ? ಎಂದು ನನಗನಿಸಿತ್ತು. ಆದರೆ ಅದನ್ನು 'ಕಾಯಕ ಕೈಲಾಸ' ಸುಳ್ಳಾಗಿಸಿತು. ಜೀವನದ ಮೌಲ್ಯಗಳು ಬಂಗಾರದಂತೆ ಚೊಕ್ಕ. ಅವು ಎಂದೂ ಮಾಸುವುದಿಲ್ಲ. ಅವುಗಳನ್ನು ಆರಾಧಿಸುವ ಜನ ಇದ್ದಾರೆ. ಹುಟ್ಟುತ್ತಲೇ ಇರುತ್ತಾರೆ. ಅಂಥವರಿಂದಲೇ ಸಮಾಜದ ಕಲ್ಯಾಣವಾಗುತ್ತಲೇ ಇರುತ್ತವೆ ಇಂತಹ ವಿಷಯವನ್ನು ಅಡಿಪಾಯವಾಗಿಸಿಕೊಂಡು ರಚಿಸಿದ ಕೃತಿಯೇ ಕಾಯಕ ಕೈಲಾಸ.

About the Author

ಸುನಂದಾ ಬೆಳಗಾಂವಕರ
(20 October 1935)

ಇಪ್ಪತ್ತನೆ ಶತಮಾನದ ಪೂರ್ವಾರ್ಧದ ಸಮಕಾಲೀನ ಲೇಖಕಿಯರಲ್ಲಿ ಒಂದು ಗಣನೀಯ ಹೆಸರೆಂದರೆ ಸುನಂದಾ ಬೆಳಗಾಂವಕರ. ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು. ಸುನಂದಾ ಬೆಳಗಾವಕರರವರು ಬರೆದ ‘ಕಜ್ಜಾಯ(ಪ್ರಬಂಧ)’ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ  ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಅವರು ‘ಶಾಲ್ಮಲಿ’ ಎನ್ನುವ ಕಾವ್ಯಸಂಕಲನ, ‘ನಾಸು’, ‘ಝವೇರಿ’ ಎನ್ನುವ ಕಾದಂಬರಿಗಳನ್ನು ಬರೆದಿದ್ದಾರೆ. ಸುನಂದಾ ಬೆಳಗಾಂವಕರ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ‘ನಾಸು’ ಕಾದಂಬರಿಗೆ 1990 ರಲ್ಲಿಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಲಭಿಸಿದೆ. 2017ರಲ್ಲಿ ನಿಧನ ಹೊಂದಿದರು.  ...

READ MORE

Related Books