‘ರೇಖಾನಮನ’ ಚಿತ್ರ ಕಲಾವಿದ, ಲೇಖಕ ಬಸವರಾಜ ಎಸ್. ಕಲೆಗಾರ ಅವರ ಕಲೆಗೆ ಸಂಬಂಧಿಸಿದ ಲೇಖನಗಳ ಸಂಕಲನ. ದೃಶ್ಯಕಲೆಯ ಬೀಜವೇ ಬಿಂದು. ಆ ಬಿಂದುವಿನ ಚಲನಶೀಲ ನಡಿಗೆಯ ರೇಖೆಯು ಹಲವು ರೂಪಗಳನ್ನು ತಳೆಯುವಿಕೆಯಲ್ಲಿ ಕಲಾವಿದರ ಕನಸುಗಳ ಪಾತ್ರವು ಬಹಳ ಪ್ರಭಾವಶಾಲಿ.
ಈ ಕೃತಿಯಲ್ಲಿ ಬಸವರಾಜ ಕಲೆಗಾರ ಅವರು ಹಲವಾರು ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸಿದ್ದಾರೆ. ಡಾ.ಎಸ್.ಸಿ. ಪಾಟೀಲ, ಬಸವರಾಜ ಎಲ್. ಜಾನೆ, ಸಂಗಣ್ಣ ಮಲಗೊಂಡ ದೋರನಹಳ್ಳಿ, ಡಾ. ಶಾಹೀದ್ ಪಾಶಾ, ಡಾ.ಎಸ್.ಎಸ್,ಗುಬ್ಬಿ, ಯಂಕಪ್ಪ ಆರ್.ನಾಟೇಕಾರ ಮೊದಲಾದವರನ್ನು ಸಹೃದಯತೆಯಿಂದ ಕಂಡಿದ್ದಾರೆ. ಈ ವ್ಯಕ್ತಿತ್ವಗಳ ಜೊತೆಗೆ ಬಹುಮುಖ್ಯವಾದ ಯಾದಗಿರಿ ತಾಲೂಕಿನ ಚಿತ್ರಕಲೆ ಸಮಗ್ರ ನೋಟ, ಉತ್ಸವ ರಾಕ್ ಗಾರ್ಡನ್, ಬಳಿಚಕ್ರದ ಆದಿ ಮಾನವನ ಚಿತ್ರ ನಿರೂಪಣೆ ಮೊದಲಾದ ಉಪಯುಕ್ತ ವಿವರಗಳ ಬರಹಗಳು ಸಂಕಲನದಲ್ಲಿವೆ.
ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...
READ MORE