‘ಮಹಾದೇವ ಬಾಬಾ’ ಮೆಡೋಸ್ ಟೇಲರ್ -ಪತ್ರಕರ್ತ, ಲೇಖಕ ದೇವು ಪತ್ತಾರ ಅವರು ಸಂಪಾದಿಸಿರುವ ಲೇಖನಗಳ ಸಂಕಲನ. ಇಂಗ್ಲೆಂಡ್ ನಲ್ಲಿ ಹುಟ್ಟಿ ಸಣ್ಣ ಪ್ರಾಯದಲ್ಲೇ ಭಾರತಕ್ಕೆ ಬಂದು ಇಲ್ಲಿಯೇ ಬೆಳೆದು ನಿಜಾಮ ಸರ್ಕಾರದಲ್ಲಿ ಜನಪರ ಆಡಳಿತಗಾರನಾಗಿ ಜನರ ಪ್ರೀತಿ ಗಳಿಸಿದ್ದ ಮೆಡೋಸ್ ಟೇಲರ್ ಕುರಿತ ಲೇಖನಗಳು ಸಂಕಲನಗೊಂಡಿವೆ. ಐತಿಹಾಸಿಕ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮೆಡೋಸ್ ಟೇಲರ್, ಲೇಖಕನಾಗಿಯೂ ಜನಪ್ರಿಯನಾಗಿದ್ದ. ಹಾಗೆಯೇ, ದಖ್ಖನ್ ಪ್ರದೇಶ ಎಂದು ಗುರುತಿಸಲಾಗುವ ಬೀದರ್, ಗುಲ್ಬರ್ಗದ ಸುರಪುರ, ರಾಯಚೂರು ಪ್ರದೇಶಗಳಲ್ಲಿ ಆಡಳಿತಗಾರನಾಗಿ ಈತ ಕೈಗೊಂಡ ಕ್ರಮಗಳು ಜನಪರವಾಗಿದ್ದವು. ಶಾಲೆಗೆ ಹೋಗಿ ಕಲಿತದ್ದು ಸ್ವಲ್ಪ. ಆದರೆ, ಆತನಿಗಿದ್ದ ಎಂಜಿನಿಯರಿಂಗ್ ಕೌಶಲ್ಯ ಅನನ್ಯವಾಗಿತ್ತು. ನೂರಾರು ಕೆರೆಗಳ ನಿರ್ಮಾಣದ ಮೂಲಕ ನೆಲ ಹಸಿರಾಗಿಸುವ ಕನಸು ಕಂಡಿದ್ದ ಟೇಲರ್, ಹತ್ತಿಯ ಬೀಜ ತರಿಸುವ ಮೂಲಕ ಕೃಷಿಗೆ ಆದ್ಯತೆ ನೀಡಿದ್ದ. ಇಲ್ಲಿಯ ಜನರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದ. ಐತಿಹಾಸಿಕ ಸ್ಮಾರಕಗಳನ್ನು ಪೇಂಟಿಂಗ್ ಗಳಲ್ಲಿ ದಾಖಲಿಸಿದ ಅಪರೂಪದ ಕಲಾವಿದ. ವಿದ್ಯಾರ್ಥಿಗಳಿಗಾಗಿ ಭಾರತೀಯ ಇತಿಹಾಸ ಕುರಿತು ಬೃಹತ್ ಗಾತ್ರದ ಸಂಪುಟ ಪ್ರಕಟಿಸಿ, ಟೇಲರ್ ಪೀಪಲ್ಸ್ ಆಫ್ ಇಂಡಿಯಾ ಸರಣಿಯ ಪುಸ್ತಕಗಳ ಮೂಲಕ ಭಾರತೀಯ ಸಮಾಜದ ಹಲವು ಮಗ್ಗಲುಗಳನ್ನು ದಾಖಲಿಸಿದ್ದ.
ಪ್ರಾಗೈತಿಹಾಸಿಕ ಶೋಧಗಳ ಮೂಲಕ ಮಹತ್ವದ ಕಾರ್ಯ ಮಾಡಿರುವ ಟೇಲರ್ ಜನಿಸಿ 2008ರ ಸೆಪ್ಟೆಂಬರ್ 25ಕ್ಕೆ 200 ವರ್ಷ ತುಂಬಿದ ಸಂದರ್ಭದಲ್ಲಿ ವಾರ್ತಾ ಇಲಾಖೆ ಬೀದರ್ ನಲ್ಲಿ ವಿಚಾರ ಸಂಕಿರಣ ಏರ್ಪಡಿಸಿತ್ತು. ಆ ಸಂಕಿರಣದಲ್ಲಿ ವ್ಯಕ್ತವಾದ ವಿಚಾರಗಳೂ ಸೇರಿದಂತೆ ವಿವಿದೆಡೆಯಿಂದ ಸಂಗ್ರಹಿಸಿದ ಲೇಖನ ರೂಪದ ಮಾಹಿತಿಗಳನ್ನು ಒಟ್ಟುಗೂಡಿಸಿ ಟೇಲರ್ ನ ಜೀವನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ.
ಪತ್ರಕರ್ತ, ಲೇಖಕ ದೇವು ಪತ್ತಾರ ಅವರು ಮೂಲತಃ ಯಾದಗಿರಿ ಜಿಲ್ಲೆ ಶಹಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಲಿಂಗ್ವಿಸ್ಟಿಕ್ಸ್ ಹಾಗೂ ಟ್ರಾನ್ಸಲೇಷನ್‌ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ. ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕ ಹಾಗೂ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಮೀಡಿಯಾದಲ್ಲಿ ಪ್ರಧಾನ ಸಂಪಾದಕರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಉದ್ಯೋಗ ಖಾತ್ರಿ ಮತ್ತು ವಲಸೆ ಕುರಿತು ಅಧ್ಯಯನ ವರದಿ ಮಂಡಿಸಿರುವ ಇವರು ...
READ MORE