ಒಂದೇ ಗುರಿ ಬೇರೆ ದಾರಿ

Author : ಕೇಶವ ಮಳಗಿ

Pages 252

₹ 220.00

Buy Now


Year of Publication: 2018
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರು ಮಾರ್ಗ, ಬಳ್ಳಾರಿ - 583113
Phone: 9480353507

Synopsys

ಭಾರತೀಯ ಪರಂಪರೆಯನ್ನು ರಾಜಕೀಯ ಮತ್ತು ತಾತ್ವಿಕ ಸಂವಾದದ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಯತ್ನಿಸುವ ಕೃತಿ ’ಒಂದೇ ಗುರಿ ಬೇರೆ ದಾರಿ’. ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ನಡೆದ ವಿವಿಧ ಸ್ತರದ ಸಂವಾದಗಳನ್ನು ಕೃತಿ ಪರಿಶೀಲಿಸುತ್ತದೆ. ಉದಾಹರಣೆಗೆ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರ್‌, ಜವಹಾರ್‌ ಲಾಲ್‌ ನೆಹರೂ, ಸುಭಾಷ್‌ ಚಂದ್ರಬೋಸ್‌, ಅಂಬೇಡ್ಕರ್‌ ಅವರ ನಡುವೆ ಎದ್ದ ಚರ್ಚೆಗಳು, ಭಿನ್ನಾಭಿಪ್ರಾಯ ಸಹಮತಗಳನ್ನು ಕೃತಿ ಭಿನ್ನ ರೀತಿಯಲ್ಲಿ ಧ್ಯಾನಿಸುತ್ತದೆ. 

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books