ಹಿರಿಯ ಸಾಹಿತಿ ಬಾಲಚಂದ್ರ ಜಯ ಶೆಟ್ಟಿ ಅವರು ರಚಿಸಿd ಕೃತಿ-ಭಾಷಣಕಲೆ. ಭಾಷಣ ಎಂದರೆ ಸಮೂಹದ ಮುಂದೆ ಆಡುವ ಬರೀ ಮಾತಲ್ಲ. ವಿಚಾರಗಳ ಮೊತ್ತವೂ ಅಲ್ಲ. ಕೇವಲ ಅಭಿವ್ಯಕ್ತಿ ಮಾಧ್ಯಮವೂ ಅಲ್ಲ. ನಮ್ಮ ಭಾವನೆಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವ ಮಾಧ್ಯಮ ಎಂದರೆ ಭಾಷೆ ಪರಸ್ಪರ ಮಾತುಕತೆಯಲ್ಲಿ ಬಳಸುವ ಭಾಷೆಯ ಸಂಭಾಷಣೆ ಎನಿಸುತ್ತದೆ. ಅದೇ ಒಬ್ಬ ವ್ಯಕ್ತಿಯ ಜನಸಮೂಹದ ಎದುರಿಗೆ ತನ್ನ ವಿಚಾರಗಳನ್ನು ಮಂಡಿಸುವುದಕ್ಕೆ ಭಾಷಣ ಎಂದು ಕರೆಯಲಾಗುತ್ತದೆ. ಅದು ಹೇಗಿರಬೇಕು ಎಂಬುದು ಒಂದು ಕಲೆಯಾಗಿದೆ. ಇಂಥ ಭಾಷಣ ಕಲೆಯ ಕುರಿತು ಕನ್ನಡದಲ್ಲಿ ಅಪರೂಪವಾಗಿ ಸಾಹಿತ್ಯ ಸಿಗುತ್ತದೆ. ಮಾತಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದ ಮಾತ್ರಕ್ಕೆ ಎಲ್ಲರೂ ಭಾಷಣಕಾರರು ಆಗೋದಿಲ್ಲ. ಉತ್ತಮ ಭಾಷಣಕಾರರಾಗಲು ಒಂದು ಮಾರ್ಗಸೂಚಿ ಪುಸ್ತಕ ಅವಶ್ಯಕತೆ ಇತ್ತು. ಅದನ್ನು ಅವರು ಭಾಷಣ ಕಲೆ ಎಂಬ ಕೃತಿಯ ಮೂಲಕ ಒದಗಿಸಿಕೊಟ್ಟಿದ್ದಾರೆ. ಸಂಬಂಧಿಸಿದ ಅಂಶಗಳನ್ನು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮಾತನಾಡುವವರು ಜನನಾಯಕರು ವರ್ಗದವರಿಗೂ ಉಪಯುಕ್ತವಾಗಿದೆ.
ಲೇಖಕ, ಅನುವಾದಕ ಭಾಲಚಂದ್ರ ಜಯಶೆಟ್ಟಿ ಅವರು ಮೂಲತಃ ಬೀದರ ಜಿಲ್ಲೆಯವರು. ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರದಲ್ಲಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ರಾಜೇಶ್ವರ, ಬಸವಕಲ್ಯಾಣದಲ್ಲಿ ಪಡೆದರು. ಆನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಂ.ಎ ಪದವಿ ಪಡೆದರು. ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಪ್ರಭುತ್ವ ಪಡೆದಿದ್ದ ಅವರು ಶಿಕ್ಷಣ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸರಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ, ಸರಕಾರಿ ಮಹಾವಿದ್ಯಾಲಯ ಗುಲಬರ್ಗಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀದರ ಮುಂತಾದೆಡೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದರು. ಹಲವಾರು ಶಿಕ್ಷಣ ಸಂಸ್ಥೆಗಳ ...
READ MORE