ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಮನದೊಂದಿಗೆ ಮಾತುಕತೆ- ಕೃತಿಯು ಲೇಖನಗಳ ಸಂಗ್ರಹವಾಗಿದೆ. ‘ಸಾರೊಳಗಿನ ಸೌಟು, ನೀನಾರಿಗಾದೆಯೊ ಎಲೆ ಮಾನವ?, ಪನ್ನೀರಿನ ಕೊಳ ಮತ್ತು ನಾಯಿ, ಮೀನು ಕೊಳೆಯುವುದು ಇತ್ಯಾದಿ, ಫಿರಂಗಿ ಬಾಯಿಯ ಗುಬ್ಬಚ್ಚಿ ಗೂಡು, ನಾಯಿಯನ್ನು ಹಿಂದೆ ಹಾಕುವ ಬಾಲ, ನಿಸರ್ಗದ ನೋಟ ಕಲಿಸುವ ಪಾಠ, ವಿನಯವಂತ ವಿ.ಸೀ., ಸರಳ, ಸದಭಿರುಚಿಯ ಸಾಹಿತ್ಯಕಾರ ಮಾಸ್ತಿ, ಸರಸತೆ ಸಂಶೋಧನೆಗಳ ಸಂಗಮ : ಎಂ.ಆರ್. ಶ್ರೀ., ಪೂರ್ಣ ಸಂಕೀರ್ಣತೆಯ ಉಪಾಸಕ ಡಾ. ವಿ.ಕೃ. ಗೋಕಾಕ್, ಸಾಮಾನ್ಯನಿಗೆ ಸಾಹಿತ್ಯ ಸಮಾರಾಧನೆ, ಕೃತಿರತ್ನ ಪರೀಕ್ಷಕನಿಗೆ ಕರೆಯೋಲೆ, ಸಾತ್ವಿಕ ದೈವೀಸ್ವರೂಪಿ ಸರಸ್ವತಿ, ಮಠಾಧೀಶರ ಮನೋಗತಗಳಿಗೆ ಸ್ವಾನುಭವದ ಸಿಂಧುತ್ವ, ನೆಹರು ಅಲ್ಲದಿದ್ದರೆ ಯಾರು ಪ್ರಸ್ತುತ?’ ಹೀಗೆ ಒಟ್ಟು 30 ಲೇಖನಗಳ ಸಂಗ್ರಹವೇ ಈ ಕೃತಿ.
ಭಾವಗೀತೆಗಳ ಮೊದಲ ಕನ್ನಡ ಧ್ವನಿಸುರುಳಿ ‘ನಿತ್ಯೋತ್ಸವ’ದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅವರ ತಂದೆ ಮೈಸೂರು ಸರ್ಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ತಾಯಿ ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ. 1936ರ ಫೆಬ್ರುವರಿ 5ರಂದು ಜನಿಸಿದರು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ...
READ MORE