‘ಪಶ್ಚಿಮ ಸೂರಿಗಳು’ ಕೆ. ಸತ್ಯನಾರಾಯಣ ಅವರ ಕನ್ನಡೇತರ ಲೇಖಕರು ಮತ್ತು ಚಿಂತಕರ ಕುರಿತ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಕನ್ನಡ ಲೇಖಕರಲ್ಲದ ಬೇರೆ ಭಾಷೆಯ, ಸಂಸ್ಕೃತಿಯ ಲೇಖಕರ ಕುರಿತ ಲೇಖನಗಳಿವು. ಇವರೆಲ್ಲ ಕನ್ನಡ ಲೇಖಕರಲ್ಲ ಎಂಬ ಮಾತು ನಿಜಕ್ಕೂ ಸರಿಯಲ್ಲ. ಕನ್ನಡ ಓದುಗ ಓದಿದ ತಕ್ಷಣವೇ ಇವರೆಲ್ಲಾ ಕನ್ನಡ ಲೇಖಕರುಳಾಗಿಬಿಡುತ್ತಾರೆ. ಹೀಗೆ ಬೇರೆ ಭಾಷೆಗಳ, ಸಂಸ್ಕೃತಿಗಳ ಲೇಖಕರುಗಳಿಗೆ, ಚಿಂತಕರಿಗೆ ತೆರೆದುಕೊಳ್ಳುವ ಒಂದು ಸ್ವಭಾವ ಕನ್ನಡ ಓದುಗರಲ್ಲಿ, ಲೇಖಕರಲ್ಲಿ ಆಳವಾಗಿದೆ. ನಾನೂ ಕೂಡ ಈ ಸ್ವಭಾವದವ. ಇಲ್ಲಿರುವ ಎಲ್ಲ ಲೇಖಕರು ಪಶ್ಚಿಮಕ್ಕೆ ಸೇರಿಲ್ಲದವರಾದರೂ ಅನ್ಯಭಾಷೆ, ಸಂಸ್ಕೃತಿಗಳನ್ನು "ಪಶ್ಚಿಮ" ದ ಜೊತೆ ಸಮೀಕರಿಸುವುದರಿಂದ "ಪಶ್ಚಿಮ ಸೂರಿಗಳು" ಎಂದು ಹೆಸರಿಟ್ಟಿದ್ದೇನೆ. ಎಲ್ಲವೂ ಕನ್ನಡದಲ್ಲೇ ಇದೆ. ಎಲ್ಲವೂ ನಮ್ಮ ಇತಿಹಾಸ ಪರಂಪರೆಯಲ್ಲೇ ಇದೆ. ಹೊರಗಡೆಯಿಂದ ಕಲಿಯಬೇಕಾದ್ದು ಏನೇನೂ ಇಲ್ಲ. ಎಂಬ ತುದಿ ನಿಲುವು ಎಷ್ಟು ಅಪಾಯಕಾರಿಯೋ, ಎಲ್ಲದಕ್ಕೂ ಹೊರಗಿನ ಚಿಂತನೆಗಳು, ಪರಿಕರಗಳನ್ನು ಮಾನದಂಡಗಳನ್ನಾಗಿ ಮಾಡಿಕೊಳ್ಳುವುದೂ ಕೂಡ ಅಷ್ಟೇ ಅಪಾಯಕಾರಿ." ಎಂದು ಲೇಖಕರು ಇಲ್ಲಿ ವಿವರಿಸಿದ್ದಾರೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE