’ಕಂಡ ಹಾಗೆ ಸಂಗ್ರಹ-3’ ಕೃತಿಯು ಗೌರಿ ಲಂಕೇಶ್ ಅವರ ಲೇಖನಗಳ ಸಂಕಲನ. ಸಮಾಜ, ರಾಜಕಾರಣ, ಶಿಕ್ಷಣ ಸೇರಿದಂತೆ ವಿವಿಧ ವಲಯಗಳ ವಿದ್ಯಮಾನಗಳ ಮೇಲೆ ತೀಕ್ಷ್ಣ ನೋಟ ಬೀರಿ, ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಜನಜಾಗೃತಿ ಮೂಡಿಸುವ ಬರಹಗಳನ್ನು ಸಂಕಲಿಸಲಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಕೆ.ಫಣಿರಾಜ್ ಅವರು, ‘ಗೌರಿದು ದೊಡ್ಡ ಗಂಟಲು, ಏನೋ ಅನಾಹುತವಾದ ಹಾಗೆ ಎದೆಬಡಿದುಕೊಂಡು ರಾದ್ಧಾಂತ ಮಾಡುತ್ತಾರೆ-ಅನ್ನೋರಿಗೇನೂ ಕಮ್ಮಿ ಇಲ್ಲ. ಹಾಗನ್ನುವವರು ನೆನಪಿಡಬೇಕು: ಗೌರಿಯಂಥವರು ಹಾಗೆ ಮಾಡದೇ ಹೋದರೆ ಮೋದಿ, ಅಡ್ವಾನಿಗಳಂಥ ಫ್ಯಾಸಿಸ್ಟರು ಪ್ರಧಾನಿಯಾಗಲಿ ಅಂದಾಗ ನಮಗೆ ಷಾಕ್ ಆಗುವುದಿಲ್ಲ, ಯಡಿಯೂರಪ್ಪನನ್ನು ಆಧುನಿಕ ಬಸವನೆನ್ನಲು ನಾಚಿಕೆಯಾಗುವುದಿಲ್ಲ. ಆದರೆ, ಗೌರಿ ಪ್ರತಿವಾರವೂ ಆಣೆಬಡ್ಡಿ ರಂಗವ್ವನ ಹಾಗೆ ಗಂಟಗಟ್ಟಲೆ ಮಾತಾಡಿ, ನಮ್ಮ ಷಾಕ್ ಆಗುವ, ನಾಚಿಕೆಪಡುವ ಸೂಕ್ಷ್ಮ ಸಂವೇದನೆಗಳನ್ನು ಎಚ್ಚರದಿಂದ ಕಾಪಾಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962 ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...
READ MORE