ಕವಿ ಸಂಗಮೇಶ ತಮ್ಮನಗೌಡ್ರ ಅವರು ಬೇಂದ್ರೆ ವ್ಯಕ್ತಿತ್ವ ಹಾಗೂ ಸಾಹಿತ್ಯ ಕುರಿತು ಬರೆದ ಕೃತಿ-ಬೇಂದ್ರೆ ಭಾವಬಿಂಬ. ಡಾ. ದ.ರಾ. ಬೇಂದ್ರೆ ಅವರ ಕಾಲಾತೀತ ಪ್ರಜ್ಞೆ, ಅಂತರಂಗದ ನುಡಿಗಳು, ಬೇಂದ್ರೆ ಅವರ ಪಜ್ಞಾವಲಯದ ಭವ ಹಾಗೂ ಅನುಭಾವ ವಿಚಾರ, ಬೇಂದ್ರೆ ಕರಗತ ಮಾಡಿಕೊಂಡಿರುವ ಅಂತರಂಗದ ಗುಟ್ಟು, ಬೇಂದ್ರೆ ಅವರು ವ್ಯಕ್ತಪಡಿಸುವ ವಿಡಂಬನಾತ್ಮಕ ಧ್ವನಿ, ಸಸಾರ ಅಲ್ಲವೋ ಸಂಸಾರ; ಅದು ನಿಸಾರವೂ ಅಲ್ಲ ಪೂರಾ, ಇವನ ಗಡ್ಡಾ ಅಡ್ಢಾತಿಡ್ಡ, ಇವನ ಮೀಸೀ; ಹರಕಾ ಹರಕಾ ಹೀಗೆ ಒಟ್ಟು 37 ಲೇಖನಗಳನ್ನು ಬರೆಯುವ ಮೂಲಕ ಬೇಂದ್ರೆ ಅವರ ಭಾವನಾತ್ಮಕ ಜಗತ್ತನ್ನು ಕಟ್ಟಿಕೊಟ್ಟಿದ್ದಾರೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE