‘ಕರೋನಾ ನೆರಳಲ್ಲಿ’ ಲೇಖಕ ನಾ. ದಿವಾಕರ ಅವರು ಕರೋನಾ ಕುರಿತು ಬರೆದ ಲೇಖನಗಳ ಸಂಕಲನ. ಕೋವಿಡ್ 19 ಒಂದು ನಿಸರ್ಗ ಸೃಷ್ಟಿ. ಒಂದು ಸೂಕ್ಷ್ಮಾತಿಸೂಕ್ಷ್ಮ ವೈರಾಣು. ಕಳೆದ ಒಂದೂವರೆ ವರ್ಷದಲ್ಲಿ ಈ ವೈರಾಣು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಅಡಿಪಾಯವನ್ನೂ ಅಲುಗಾಡಿಸಿಬಿಟ್ಟಿದೆ. ಕೊರೋನಾ ಒಂದು ಸಾಂಕ್ರಾಮಿಕವಾಗಿ ವಿಶ್ವವ್ಯಾಪಿ ಹರಡಿ ಎಲ್ಲ ದೇಶಗಳ ಅರ್ಥವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿರುವುದು ವಾಸ್ತವ. ಭಾರತವೂ ಇದಕ್ಕೆ ಹೊರತಾಗಲ್ಲ. ಹುಲುಮಾನವರನ್ನು ಬೆಂಬಿಡದೆ ಕಾಡುತ್ತಿರುವ ಈ ವೈರಾಣು ಈ ವೇಳೆಗಾಗಲೇ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಂಡಿದೆ. ಕೋಟ್ಯಂತರ ಕುಟುಂಬಗಳು ಬೀದಿಪಾಲಾಗಿವೆ. ಬಂಡವಾಳಶಾಹಿ ವ್ಯವಸ್ಥೆಯ ಎಲ್ಲ ನ್ಯೂನತೆಗಳನ್ನು, ಲೋಪಗಳನ್ನು, ದೋಷಗಳನ್ನು ಮತ್ತು ಆಂತರಿಕ ವೈರುಧ್ಯಗಳನ್ನು ಈ ಒಂದು ವೈರಾಣು ಹೊರಹಾಕಿರುವುದು ಸತ್ಯ. ಭಾರತದ ಸಂದರ್ಭದಲ್ಲಿ ಕೊರೋನಾ, ಭಾರತದಂತೆಯೇ ವೈವಿಧ್ಯಮಯ ಸ್ವರೂಪಗಳನ್ನು ಹೊರಗೆಡಹಿದೆ. ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿ ಹೊರಹೊಮ್ಮಲು, ವಿಶ್ವಗುರು ಪಟ್ಟ ಪಡೆಯಲು ಹರಸಾಹಸ ಮಾಡುತ್ತಿರುವ ಒಂದು ಬೃಹತ್ ರಾಷ್ಟ್ರದ ಒಳಹುಳುಕುಗಳನ್ನು ಈ ಸೂಕ್ಷ್ಮ ವೈರಾಣು ಬಯಲುಮಾಡಿಬಿಟ್ಟಿದೆ ಎನ್ನುತ್ತಾರೆ ಲೇಖಕ ನಾ. ದಿವಾಕರ. ಈ ಕೃತಿಯಲ್ಲಿ ಕರೋನ ಕಾಲಘದಲ್ಲಿ ದೇಶದಲ್ಲಾದ ಅವ್ಯವಸ್ಥೆಗಳು ಮತ್ತು ಸನ್ನಿವೇಶಗಳ ಕುರಿತು ವಿವಿಧ ಸನ್ನಿವೇಶಗಳಲ್ಲಿ ಬರೆದ ಲೇಖನಗಳು ಸಂಕಲನಗೊಂಡಿವೆ.
ಚಿಂತಕ, ಲೇಖಕ ನಾ. ದಿವಾಕರ ಅವರು ಹುಟ್ಟಿದ ಊರು ಕೋಲಾರ ಜಿಲ್ಲೆಯ ಚಿಂತಾಮಣಿ. 1961ರಲ್ಲಿ ಜನಿಸಿದ ಅವರು ಬೆಳೆದದ್ದು ಅದೇ ಜಿಲ್ಲೆಯ ಬಂಗಾರಪೇಟೆಯಲ್ಲಿ. ಪೂರ್ಣ ವಿದ್ಯಾಭ್ಯಾಸ ಬಂಗಾರಪೇಟೆಯಲ್ಲಿ ಮುಗಿಸಿದ ಅವರು ಬಿಕಾಂ ವ್ಯಾಸಂಗವನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಗಾಯನ, ನಾಟಕಗಳಲ್ಲಿ ಆಸಕ್ತಿಯೊಂದಿದ್ದ ಅವರು, ಹಲವು ಗೀತ ಗಾಯನ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಿಹಿಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದ ನಂತರ ರಾಜಕೀಯದತ್ತ ಒಲವು ತೊರಿದ ದಿವಾಕರ್ ಕ್ರಮೇಣ ದಲಿತ ಚಳುವಳಿ ಮತ್ತು ಮಾರ್ಕ್ಸ್ ವಾದಿ ಅಧ್ಯಯನದತ್ತ ಒಲವು ಬೆಳೆಸಿಕೊಂಡರು. 1982ರಲ್ಲಿ ಪದವಿ ಮುಗಿಸಿ 1984ರಲ್ಲಿ ಕೆನರಾಬ್ಯಾಂಕ್ ...
READ MORE