ಎಚ್ .ಎಸ್. ಬೇನಾಳ ಅವರ ಈ ಸಂಕಲನದ ಲೇಖನಗಳು, ಇವತ್ತಿನ ಕಾಲಘಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಕುರಿತಾಗಿವೆ. ತಮ್ಮ ಓದಿನಿಂದ ಉಂಟಾದ ಗ್ರಹಿಕೆಗೆ ದಕ್ಕಿದ ಅನಿಸಿಕೆಗಳನ್ನು ಬಹು ಆಯಾಮದ ಚಿಂತನೆಗಳ ಬರಹ ರೂಪವನ್ನು ಇಲ್ಲಿ ನೀಡಿದ್ದಾರೆ. ಪುಸ್ತಕಗಳು ಕೇವಲ ಕಾಗದದ ತುಂಡುಗಳಲ್ಲ, ಅವು ಬಾಳಿಗೆ ಬೆಳಕು ನೀಡುವ ಜ್ಞಾನಾಮೃತಗಳು ಎಂಬ ಅರಿವಿನಿಂದ ಗ್ರಂಥಾಲಯಗಳ ಮಹತ್ವ ಕುರಿತ ಲೇಖನವೂ ಇಲ್ಲಿದೆ.
ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...
READ MORE