‘ಎಡೆಗಳು ಹೇಳುವ ಕಂನಾಡ ಕತೆ’ ಶಂ. ಬಾ. ಜೋಶಿ ಅವರ ಲೇಖನಗಳ ಸಂಗ್ರಹವಾಗಿದೆ. ಭಾಷೆಯ ರಚನೆ ಮತ್ತು ಬಳಕೆಗಳ ಬಗೆಗೆ ಲೇಖಕರು ನಡೆಸಿರುವ ಚಿಂತನೆ ಮತ್ತು ಚರ್ಚೆಗಳನ್ನು ಇಲ್ಲಿನ ಹತ್ತೊಂಬತ್ತು ಲೇಖನಗಳಲ್ಲಿ ಕಾಣಬಹುದು. ಶ್ರೇಷ್ಠ ಸಾಹಿತ್ಯ ವಿಮರ್ಶಕರಾದ ಕೆ. ವಿ. ನಾರಾಯಣ ಅವರು ಇತ್ತೀಚಿನ ವರ್ಷಗಳಲ್ಲಿ ಭಾಷಾವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು ಹಲವಾರು ಮುಖ್ಯವಾದ ಲೇಖನಗಳನ್ನು ಬರೆದಿದ್ದಾರೆ.
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...
READ MOREಹೊಸತು- ಆಗಸ್ಟ್-2005
ಭಾಷೆಯ ರಚನೆ ಮತ್ತು ಬಳಕೆಗಳ ಬಗೆಗೆ ಲೇಖಕರು ನಡೆಸಿರುವ ಚಿಂತನೆ ಮತ್ತು ಚರ್ಚೆಗಳನ್ನು ಇಲ್ಲಿನ ಹತ್ತೊಂಬತ್ತು ಲೇಖನಗಳಲ್ಲಿ ಕಾಣಬಹುದು. ಶ್ರೇಷ್ಠ ಸಾಹಿತ್ಯ ವಿಮರ್ಶಕರಾದ ಕೆ. ವಿ. ನಾರಾಯಣ ಅವರು ಇತ್ತೀಚಿನ ವರ್ಷಗಳಲ್ಲಿ ಭಾಷಾವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು ಹಲವಾರು ಮುಖ್ಯವಾದ ಲೇಖನಗಳನ್ನು ಬರೆದಿದ್ದಾರೆ. ಭಾಷೆಯ ಬಗ್ಗೆ ಬಂದಿರುವ ಆಧುನಿಕ ಚಿಂತನೆಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಲೇಖಕರು ಅವುಗಳನ್ನು ಕನ್ನಡದ ಸಂದರ್ಭಕ್ಕೆ ಚೆನ್ನಾಗಿ ಉಪಯೋಗಿಸಿ ಕೊಳ್ಳುತ್ತಾರೆ. ಬದಲಾದ ಸನ್ನಿವೇಶದಲ್ಲಿ ಕನ್ನಡ ಹೊಸ ಸವಾಲುಗಳನ್ನು ಯಾವ ರೀತಿ ಎದುರಿಸಬೇಕೆಂಬ ಅಂಶವನ್ನು ಇಲ್ಲಿನ ಟಿಪ್ಪಣಿಗಳು ವಸ್ತುನಿಷ್ಠವಾಗಿ ಚರ್ಚಿಸುತ್ತವೆ. ಸಂಸ್ಕೃತ/ಇಂಗ್ಲಿಷ್/ತಂತ್ರಜ್ಞಾನಗಳ ಪ್ರಭಾವದಿಂದ ಕನ್ನಡ ಹೊಂದಿರುವ ಪಲ್ಲಟಗಳನ್ನು ಹಲವು ಲೇಖನಗಳು ಪರಿಶೀಲಿಸುತ್ತವೆ. ಒಟ್ಟಾರೆ ಇಲ್ಲಿನ ಬರಹಗಳು ಪರಾಯ ಚಿಂತನಾಕ್ರಮಗಳನ್ನು ರೂಪಿಸುವ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ.